Connect with us

    UDUPI

    ಭಾರೀ ಮಳೆಗೆ ಪಿಲ್ಲರ್ ಹೊಂಡಕ್ಕೆ ಬಿದ್ದ ಸಿಮೆಂಟ್ ಮಿಕ್ಸರ್

    ಉಡುಪಿ ಜೂನ್ 14: ಭಾರೀ ಮಳೆಗೆ ಸಿಮೆಂಟ್ ಮಿಕ್ಸರ್ ವಾಹನವೊಂದು ನಿರ್ಮಾಣ ಹಂತದ ಪಿಲ್ಲರ್ ಹೊಂಡಕ್ಕೆ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದೆ.ಉಡುಪಿಯ ಎಂಜಿಎಂ ಮೈದಾನ ಸಮೀಪ ಕುಂಜಿಬೆಟ್ಟುವಿನಲ್ಲಿ ಈ ಘಟನೆ ನಡೆದಿದೆ.


    ಕಳೆದೆರಡು ದಿನಗಳಿಂದ ಉಡುಪಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು. ಸಿಮೆಂಟ್ ಮಿಕ್ಸರ್ ವಾಹನ‌ವನ್ನು ನಿರ್ಮಾಣ ಹಂತದ ಕಟ್ಟದ ಸಮೀಪ ನಿಲ್ಲಿಸಲಾಗಿತ್ತು. ಕಟ್ಟಡದ ಪಿಲ್ಲರ್ ಹೊಂಡದಲ್ಲಿ ನೀರು ತುಂಬಿ ಅಕ್ಕಪಕ್ಕದ ಜಾಗದ ಭೂಮಿ ತೇವದಿಂದ ಕುಸಿಯುವ ಹಂತಕ್ಕೆ ಬಂದಿತ್ತು.

    ಈ ಸಂದರ್ಭ ಮಣ್ಣು ಕುಸಿದ ಪರಿಣಾಮ ದೊಡ್ಡ ಗಾತ್ರದ ಮಿಕ್ಸರ್ ವಾಹನ ಸಂಪೂರ್ಣ ಪಿಲ್ಲರ್ ಹೊಂಡದೊಳಗೆ ಮಕಾಡೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ನಿರ್ವಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply