ಸಿಸಿಟಿವಿಯಲ್ಲಿ ರೆಕಾರ್ಡ್ ಆದ ಮಹಿಳೆಯರ ಒಳ ಉಡುಪು ಕಳ್ಳತನದ ದೃಶ್ಯ

ಬಂಟ್ವಾಳ ಮಾರ್ಚ್ 19: ಮನೆಯ ಅಂಗಳದಲ್ಲಿ ಒಣ ಹಾಕಿದ ಮಹಿಳೆಯರ ಒಳ ಉಡುಪನ್ನು ಕದಿಯುತ್ತಿದ್ದ ಕಳ್ಳನನ್ನು ಮನೆ ಮಂದಿ ಗುರುತಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಬಳಿ ಮನೆಯೊಂದರ ಅಂಗಳದಲ್ಲಿ ಒಣ ಹಾಕಿದ್ದ ಮಹಿಳೆಯರ ಒಳ ಉಡುಪಿ ವಿಚಿತ್ರ ರೀತಿಯಲ್ಲಿ ನಾಪತ್ತೆಯಾಗುತ್ತಿತ್ತು. ಇದರಿಂದ ಬೇಸತ್ತ ಮನೆ ಮಂದಿ ಈ ವಿಚಿತ್ರ ಪ್ರಕರಣಕ್ಕೆ ಕಾರಣವೇನೆಂದು ಪತ್ತೆ ಹಚ್ಚಲು ಹರ ಸಾಹಸವನ್ನೇ ಪಟ್ಟಿದ್ದರು.

ಬಳಿಕ ಮನೆಯ ಅಂಗಳಕ್ಕೆ ಸಿಸಿ ಕ್ಯಾಮಾರಾ ಅಳವಡಿಸಿ ಒಳ ಉಡುಪಿನ ಕಳವು ಪತ್ತೆ ಹಚ್ಚಲು ಯತ್ನುಸಿದ್ದಾರೆ. ಸಿಸಿ ಕ್ಯಾಮಾರಾದಲ್ಲಿ ಒಳ ಉಡುಪು ಕಳ್ಳನ ಪತ್ತೆಯಾಗಿದ್ದು , ಈತನನ್ನು ಹಿಡಿಯಲು ಇದೀಗ ಸ್ಥಳೀಯರು ಬಲೆ ಬೀಸಿದ್ದಾರೆ. ಒಂದೋ ಈ ವ್ಯಕ್ತಿ ಉಡುಪನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿರಬಹುದು ಇಲ್ಲವೇ ಈತನೊಬ್ಬ ವಿಕೃತ ಕಾಮಿಯಾಗಿರಬಹುದೇ ಎನ್ನುವ ಸಂಶಯವೂ ಇದೀಗ ಮೂಡಲಾರಂಭಿಸಿದೆ.