Connect with us

    LATEST NEWS

    ದೇವಸ್ಥಾನಗಳ ಅಡುಗೆ ಕೋಣೆಗಳಿಗೆ ಸಿಸಿ ಟಿವಿ ಕಡ್ಡಾಯ – ಸಚಿವ ಶ್ರೀನಿವಾಸ ಪೂಜಾರಿ

    ದೇವಸ್ಥಾನಗಳ ಅಡುಗೆ ಕೋಣೆಗಳಿಗೆ ಸಿಸಿ ಟಿವಿ ಕಡ್ಡಾಯ – ಸಚಿವ ಶ್ರೀನಿವಾಸ ಪೂಜಾರಿ

    ಮಂಗಳೂರು ಸೆಪ್ಟೆಂಬರ್ 27:- ದೇವಸ್ಥಾನಗಳ ಅಡುಗೆ ಕೋಣೆಗಳಿಗೆ ಸಿಸಿ ಟಿವಿ ಕಡ್ಡಾಯವಾಗಬೇಕು. ಸರ್ಕಾರಿ ಮತ್ತು ಖಾಸಗಿ ದೇವಾಲಯಗಳಲ್ಲಿ ಸಿಸಿ ಟಿವಿಯ ಅಳವಡಿಕೆಗೆ ಶೀಘ್ರ ಸೂಚನೆ ನೀಡಿ ಅಳವಡಿಸುವಂತೆ ದೇವಾಲಯಗಳ ಆಡಳಿತ ಮಂಡಳಿ ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

    ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದಸರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ದಸರಾ ಮೆರವಣಿಗೆಗೆ ಸಂಬಂಧಪಟ್ಟಂತೆ ರಸ್ತೆ ಬದಿಯಲ್ಲಿ ಅಡಚಣೆಯಾಗುವ ಮರಗಳ ಕೊಂಬೆಗಳನ್ನು ಕಡಿಯುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದರು.

    ದೇಶದಲ್ಲಿ ಜಾಗತಿಕವಾಗಿ ಹಬ್ಬಿಕೊಂಡಿರುವ ಭಯೋತ್ಪಾಧಕ ಕುರುಹುಗಳು ಕರಾವಳಿ ಪ್ರದೇಶದಲ್ಲಿಯೂ ಕಂಡು ಬಂದಿದೆ. ಆದ್ದರಿಂದ ಹಬ್ಬದ ಸಂಧರ್ಭಗಳಲ್ಲಿ ಅಪರಿಚಿತ ವ್ಯಕ್ತಿಗಳು ಕಂಡು ಬಂದು ಕೆಲಸ ಕಾರ್ಯಗಳಲ್ಲಿ ಕೈಜೋಡಿಸಲು ಮುಂದಾದರೆ ಅವಕಾಶ ಕೊಡದೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ಕಳುಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತರು ಪಿ.ಎಸ್ ಹರ್ಷ ತಿಳಿಸಿದರು.

    ಸರಿಯಾದ ದಾಖಲಾತಿ ಹೊಂದಿದ ಗಾಡಿಗಳನ್ನು ಮೆರವಣಿಗೆಯಲ್ಲಿ ಬಳಸುವಂತೆ ಸೂಚಿಸಲಾಯಿತು. ವಿದ್ಯುತ್ ಬಳಕೆಯಲ್ಲಿ ಅತಿಯಾದ ಜಾಗರೂಕತೆ ಮುಖ್ಯ. ಆಹಾರ ವ್ಯವಸ್ಥೆಯು ಅಚ್ಚುಕಟ್ಟಾಗಿ, ಮಿತವ್ಯಯವಾಗಿ ಬಳಸುವಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ವಯಸ್ಕರರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಮತ್ತು ವಿಕಲಚೇತನರಿಗೆ ವಿಶೇಷ ವ್ಯವಸ್ಥೆ ಮಾಡುವಂತೆ ದೇವಾಲಯಗಳ ಆಡಳಿತ ಮಂಡಳಿಗಳಿಗೆ ಸೂಚಿಸಲಾಯಿತು. ದಸರಾ ಸಂಧರ್ಭದಲ್ಲಿ ಪೊಲೀಸ್ ಇಲಾಖೆ ವತಿಯಿಂದ 24 ಗಂಟೆ ನಿರಂತರ ಸೇವೆ ಒದಗಿಸಲಾಗುವುದು ಎಂದು ಹೇಳಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *