LATEST NEWS
ಡ್ರಗ್ಸ್ ಸಾಗಾಟ ಮಂಗಳೂರು ಮೂಲದ ಬಾಲಿವುಡ್ ನಟನ ಬಂಧನ

ಮಂಗಳೂರು ಸೆಪ್ಟೆಂಬರ್ 19: ಡ್ರಗ್ಸ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ಖ್ಯಾತ ಡ್ಯಾನ್ಸರ್, ಬಾಲಿವುಡ್ ನಟ ಕಿಶೋರ್ ಶೆಟ್ಟಿ ಅಲಿಯಾಸ್ ಅಮನ್ ಕುಮಾರ್ ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕಿಶೋರ್ ಸಿಂಥೆಟಿಕ್ ಡ್ರಗ್ ನ್ನು ಸಾಗಾಟ ಮಾಡುತ್ತಿದ್ದರು ಎಂದು ಹೇಳಲಾಗಿದ್ದು. ಈ ಆರೋಪದಲ್ಲಿ ಕಿಶೋರ್ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಿಶೋರ್ ಶೆಟ್ಟಿ ಓರ್ವ ಡ್ಯಾನ್ಸರ್ ಆಗಿದ್ದು, ಖಾಸಗಿ ವಾಹಿನಿಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದರು. ಬಾಲಿವುಡ್ ಎಬಿಸಿಡಿ ಸಿನಿಮಾದಲ್ಲಿ ಕಿಶೋರ್ ಶೆಟ್ಟಿ ಅಭಿನಯಿಸಿದ್ದಾರೆ. ಬಂಧನದ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಗಳಿವೆ. ಸುದ್ದಿಗೋಷ್ಠಿಯಲ್ಲಿ ನಟನ ಬಂಧನದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆ ಇದೆ.
