FILM
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ – ತಾರಾ ದಂಪತಿ ದಿಗಂತ ಐಂದ್ರಿತಾ ಗೆ ಸಿಸಿಬಿಯಿಂದ ನೋಟಿಸ್

ಬೆಂಗಳೂರು ಸೆಪ್ಟೆಂಬರ್ 15: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಜಾಲಕ್ಕೆ ಸಂಬಂಧಿಸಿದಂತೆ ಸಿಸಿಬಿ ನಟ ದಿಂಗತ್ ಹಾಗೂ ನಟಿ ಐಂದಿತಾ ರೇಗೆ ನೋಟಿಸ್ ಜಾರಿ ಮಾಡಿದ್ದು, ಬುಧವಾರ ಬೆಳಗ್ಗೆ 11 ಗಂಟೆಗೆ ಸಿಸಿಬಿ ಕಚೇರಿಗೆ ಹಾಜರಾಗಿ ವಿಚಾರಣೆಗೆ ಎದುರಿಸಬೇಕೆಂದು ಸೂಚಿಸಿಲಾಗಿದೆ.
ಎರಡು ದಿನಗಳ ಹಿಂದೆ ನಟಿ ಐಂದ್ರಿತಾ ರೇಯವರು ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದ ವಿಡಿಯೋ, ಫೋಟೋ ವೈರಲ್ ಆಗಿತ್ತು. ಈ ವೇಳೆ ಈ ಪ್ರಕರಣದ ಆರೋಪಿ ಶೇಖ್ ಫಾಝಿಲ್ ಜೊತೆ ಇದ್ದ ಫೋಟೋಗಳು ಸಹ ಸಿಕ್ಕಿತ್ತು.

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಅವರು ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ಅವರಿಗೆ ನೋಟಿಸ್ ನೀಡಲಾಗಿದೆ. ಅವರು ವಿಚಾರಣಗೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ರಾಗಿಣಿ ಹಾಗೂ ಸಂಜನಾ ವಿರುದ್ದ ಡ್ರಗ್ಸ್ ಜಾಲಕ್ಕೆ ನಂಟು ಸಂಬಂಧಿಸಿ ತನಿಖೆ ನಡೆಸುತ್ತಿದ್ದು , ನಟಿ ರಾಗಿಣಿಗೆ ನ್ಯಾಯಾಲಯ 14ದಿನಗಳ ನ್ಯಾಯಾಂಗ ಬಂಧನ ವಿದಿಸಿದ್ದು, ಈಗ ಅವರು ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ.
.