Connect with us

LATEST NEWS

ಅಕ್ರಮವಾಗಿ ಜಾನುವಾರು ಸಾಗಾಟ ನಾಲ್ವರ ಬಂಧನ

ಕುಂದಾಪುರ ಸೆಪ್ಟೆಂಬರ್ 15 :ಜಾನುವಾರುಗಳನ್ನು ಅಕ್ರಮವಾಗಿ ಎರಡು ಲಾರಿಗಳಲ್ಲಿ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದಾವಣಗೆರೆಯ ಮೆಹಬೂಬ್ ಮತ್ತು ಇಮ್ರಾನ್, ಬೆಳಗಾವಿಯ ಬಾಪು ಸಾಹೇಬ್, ಆಸಿಪ್ ಎಂದು ಗುರುತಿಸಲಾಗಿದೆ.


ಕುಂದಾಪುರದ ಅಮಾಸಬೈಲಿನ ಹೊಸಂಗಡಿ ಚೆಕ್ ಪೋಸ್ಟ್ ಬಳಿ ಎರಡು ಲಾರಿಗಳನ್ನು ತಡೆದು ತಪಾಸಣೆ ನಡೆಸಿದ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿದೆ.ಆರೋಪಿಗಳು ಈ ಎರಡು ಲಾರಿಗಳಲ್ಲಿ ಸುಮಾರು 52 ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದರು.

ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳು, ವಾಹನ ಹಾಗೂ ಕೋಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments