LATEST NEWS
ಶಿರೂರು ಶ್ರೀಗಳ ನಿಧನ ಹಿನ್ನಲೆ – ಅನೂರ್ಜಿತಗೊಂಡ ಕೇವಿಯಟ್ ಅರ್ಜಿ
ಶಿರೂರು ಶ್ರೀಗಳ ನಿಧನ ಹಿನ್ನಲೆ – ಅನೂರ್ಜಿತಗೊಂಡ ಕೇವಿಯಟ್ ಅರ್ಜಿ
ಉಡುಪಿ ಜುಲೈ 21: ಪಟ್ಟದ ದೇವರ ವಿಚಾರದಲ್ಲಿ ಶೀರೂರು ಲಕ್ಷ್ಮೀವರ ತೀರ್ಥರು ಸಲ್ಲಿಸಿದ್ದ ಕೇವಿಯಟ್ ಅರ್ಜಿ ಅನೂರ್ಜಿತಗೊಂಡಿದೆ. ಶಿರೂರು ಸ್ವಾಮೀಜಿಗಳ ನಿಧನದಿಂದ ಈ ಕೇವಿಯಟ್ ಅರ್ಜಿ ಅನೂರ್ಜಿತಗೊಂಡಿದೆ.
ಇತ್ತೀಚೆಗೆ ನಿಧನರಾಗಿದ್ದ ಶೀರೂರು ಲಕ್ಷ್ಮೀವರ ತೀರ್ಥರು ಪುತ್ತಿಗೆ ಶ್ರೀಗಳನ್ನು ಹೊರತುಪಡಿಸಿ ಇತರ ಮಠಾಧೀಶರ ವಿರುದ್ದ ಕೇವಿಯಟ್ ಉಡುಪಿ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು ಈ ಅವಧಿಯಲ್ಲಿ ಶೀರೂರು ವಿರುದ್ದ ಯಾರೂ ಮಾತನಾಡಬಾರದು ,ಶಿಷ್ಯ ಸ್ವೀಕಾರಕ್ಕಾಗಿ ಯಾರೂ ಒತ್ತಾಯ ಮಾಡುವಂತಿಲ್ಲ ಎಂದು ಕೇವಿಯಟ್ ನಲ್ಲಿ ಹೇಳಲಾಗಿತ್ತು. ಕೇವಿಯಟ್ ಗೆ 90 ದಿನಗಳ ಕಾಲಾವಕಾಶ ಇರುತ್ತೆ.
ಪ್ರಸ್ತುತ ಪಟ್ಟದ ದೇವರ ವಿಗ್ರಹ ಕೃಷ್ಣಮಠದಲ್ಲಿದೆಪಟ್ಟದ ದೇವರನ್ನು ಕೊಡದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸಲು ಶಿರೂರು ಶ್ರೀಗಳು ಮುಂದಾಗಿದ್ದರು. ಹೀಗಾಗಿ ಪರ್ಯಾಯ ಪಲಿಮಾರು ಶ್ರೀ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಲು ಶೀರೂರು ಶ್ರೀ ಗಳು ಸಜ್ಜಾಗಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ ಬುಧವಾರ ವಕೀಲ ರವಿಕಿರಣ್ ಮುರ್ಡೇಶ್ವರ ಅವರನ್ನು ಶಿರೂರು ಶ್ರೀಗಳು ಬರಹೇಳಿದ್ದರು. ಆದರೆ ಅಂದೇ ಆಸ್ಪತ್ರೆಗೆ ದಾಖಲಾಗಿ ಗುರುವಾರ ಶಿರೂರು ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ. .