ಉಪ್ಪಿನಂಗಡಿ, ಜನವರಿ 19: ಮಧ್ಯಾಹ್ನ ಹೊತ್ತೇ ಪ್ರತ್ಯಕ್ಷಗೊಂಡ ಚಿರತೆಯೊಂದು ಮನೆಯ ವರಾಂಡದಲ್ಲಿದ್ದ ನಾಯಿ ಮರಿಯೊಂದನ್ನು ಹೊತ್ತೊಯ್ದ ಘಟನೆ ಬುಧವಾರ ತಣ್ಣೀರುಪಂಥ ಗ್ರಾಮದ ಅಳಕ್ಕೆ ಎಂಬಲ್ಲಿ ನಡೆದಿದೆ. ತಣ್ಣೀರುಪಂಥ ಗ್ರಾಮದ ಅಳಕ್ಕೆಎಂಬಲ್ಲಿ ಗಣೇಶ್ ಎಂಬವರ ಮನೆಯ ವರಾಂಡದಲ್ಲಿ ಕಾಣಿಸಿಕೊಂಡ ಚಿರತೆ ವರಾಂಡದಲ್ಲಿ ಮಲಗಿದ್ದ 40 ದಿನ ಪ್ರಾಯದ ಪಗ್ ಜಾತಿಯ ನಾಯಿ ಮರಿಯನ್ನು ಕಚ್ಚಿಕೊಂಡು ಹೊತ್ತೊಯ್ದಿದೆ. ಗಣೇಶ್ ಇವರ ಪತ್ನಿ ಕಣಿಯೂರು ಗ್ರಾಮ ಪಂಚಾಯತ್ನಲ್ಲಿ ಪಿಡಿಒ ಆಗಿದ್ದು, ಅವರು ಕಚೇರಿಗೆ ಹೋಗಿದ್ದರು. ಕಲ್ಲೇರಿಯಲ್ಲಿ ಅಂಗಡಿ ಹೊಂದಿದ್ದ ಗಣೇಶ್ ಅವರು ಈ ಸಂದರ್ಭ ಮನೆಯಲ್ಲಿ ಒಬ್ಬರೇ ಇದ್ದಾಗ ಈ ಘಟನೆ ಸಂಭವಿಸಿದೆ. ಚಿರತೆ ಬಂದು ನಾಯಿ ಮರಿಯನ್ನು ಹೊತ್ತೊಯ್ದ ಘಟನೆಯ ಬಗ್ಗೆ ಊರಿನಲ್ಲಿ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿರುವ ಚಿರತೆಯ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಬಾರ್ಯ, ನೀಲಗಿರಿ ಪರಿಸರದಲ್ಲಿ ಸುಮಾರು 2 ತಿಂಗಳಿನಿಂದ ಚಿರತೆ ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆ ಗಮನಕ್ಕೂ ತರಲಾಗಿದೆ.
ಪುತ್ತೂರು, ಜನವರಿ 19: ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೇಸ್ ಸೇರ್ಪಡೆಗೊಂಡಿರುವ ಉದ್ಯಮಿ ಅಶೋಕ್ ರೈ ಕಳೆದ ಆರು ವರ್ಷಗಳಿಂದ ಬಿಜೆಪಿ ಸದಸ್ಯತ್ವವನ್ನೇ ಹೊಂದಿಲ್ಲ. ಹೀಗಿರುವಾಗ ಅವರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದರೆ ಅದರಿಂದ ಪಕ್ಷಕ್ಕೆ ಯಾವುದೇ...
ಉಡುಪಿ ಜನವರಿ 19: ಕನ್ನಡದ ಖ್ಯಾತ ನಟಿ ಪ್ರೇಮಾ ಅವರು ಉಡುಪಿಯ ಕಾಪು ಕೊರಗಜ್ಜ ಸನ್ನಿಧಿಗೆ ಆಗಮಿಸಿದ ಪೂಜೆ ಸಲ್ಲಿಸಿದ್ದಾರೆ. ಕೊರಗಜ್ಜ ದೈವದ ಬಳಿ ಶೀಘ್ರ ಕಂಕಣ ಭಾಗ್ಯ ಕರುಣಿಸುವಂತೆ ಬೇಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಖಾಸಗಿ...
ಮಂಗಳೂರು ಜನವರಿ 19: ಟೊಯೋಟಾ ಇನೋವಾ ಕಾರೊಂದು ಕಳೆದ ಕೆಲವು ದಿನಗಳಿಂದ ವಾರಿಸುದಾರರಿಲ್ಲದೆ ಬಿಸಿರೋಡಿನಲ್ಲಿ ಅನಾಥವಾಗಿ ನಿಂತುಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಈ ಕಾರಿನ ಬಗ್ಗೆ ಸಾಕಷ್ಟು ಸಂಶಯಗಳು ಮೂಡಿದ್ದು, ಊಹಾಪೋಹಗಳು ಕೇಳಿ ಬಂದಿದೆ. ಬಿ.ಸಿ ರೋಡಿನ...
ಆಸ್ಟ್ರೇಲಿಯಾ : ವಿಶ್ವ ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರನ್ನು ಆಸ್ಟ್ರೇಲಿಯಾ ಅನಿವಾಸಿ ವಲಸೆ ಸಚಿವರಾದ ಆಂಡ್ರೂ ಗೈಲ್ಸ್ ಇವರು ತಮ್ಮ ನಿವಾಸಕ್ಕೆ ಕರೆಯಿಸಿ ಆಶೀರ್ವಾದ ಪಡೆ ಕೊಂಡರು . ಈ...
ವಿಟ್ಲ, ಜನವರಿ 19: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಪರಿಣಾಮ ಮನೆ ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಮಾಣಿ ಸಮೀಪ ನಡೆದಿದೆ. ಘಟನೆಯಿಂದ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಮಾಣಿ ಗ್ರಾಮದ ಕಾಪಿಕಾಡು ರಮಾ ಅಶೋಕ್ ಪೂಜಾರಿ...
ಮಲೇಶಿಯಾ ಜನವರಿ 19: ಚಿತ್ರೀಕರಣದ ವೇಳೆ ತಮಿಳಿನ ಖ್ಯಾತ ನಟ ವಿಜಯ್ ಆಂಟನಿಗೆ ಅಪಘಾತವಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಮಲೇಷ್ಯಾದಲ್ಲಿ ವಿಜಯ್ ಆಂಟನಿ ನಟನೆಯ ‘ಪಿಚ್ಚೈಕಾರನ್ 2’ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ದೋಣಿಯೊಂದರಲ್ಲಿ...
ಮುಂಬೈ: ಟ್ರಕ್ ಹಾಗೂ ಕಾರು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಸಾವನಪ್ಪಿರುವ ಘಟನೆ ಮುಂಬೈ-ಗೋವಾ ಹೆದ್ದಾರಿಯಲ್ಲಿ ನಡೆದಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಹೆದ್ದಾರಿಯ ಮಂಗಾವ್ ಬಳಿ ಅಪಘಾತ ಸಂಭವಿಸಿದೆ ಎಂದು...
ಉಡುಪಿ, ಜನವರಿ 19: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಜತ ಉಡುಪಿ- ಬೀಚ್ ಉತ್ಸವ ಕಾರ್ಯಕ್ರಮವು ಜನವರಿ 20 ರಿಂದ 22 ರ...
ಚೆನ್ನೈ ಜನವರಿ 19: ಡ್ರಗ್ ಸೇವನೆ ಆರೋಪದ ಮೇಲೆ ಭಾರತದ ಓಟಗಾರ್ತಿ ದ್ಯುತಿ ಚಾಂದ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ದ್ಯುತಿ ಚಾಂದ್ ಅವರಿಗೆ ಪಾಸಿಟಿವ್...