Connect with us

    LATEST NEWS

    ಮಡಿಕೇರಿಯಿಂದ ನಾಪತ್ತೆಯಾಗಿದ್ದ ಯುವತಿಯರು ಮಲ್ಪೆ ಬಳಿ ನೀರುಪಾಲು – ಓರ್ವ ಯುವತಿ ಸಾವು….!!

    ಉಡುಪಿ ಅಗಸ್ಟ್ 06: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆ ಬಳಿ ನೀರುಪಾಲಾಗಿದ್ದು, ಓರ್ವ ಯುವತಿ ಸಾವನನಪ್ಪಿದರೆ, ಮತ್ತೊರ್ವ ಯುವತಿಯನ್ನು ರಕ್ಷಿಸಿದ ಘಟನೆ ನಡೆದಿದೆ.

    ಮಡಿಕೇರಿ ಮೂಲದ ಮಾನ್ಯ ಮೃತ ರ್ದುದೈವಿ. ಇನ್ನು ಬದುಕುಳಿದ ಯಶಸ್ವಿನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಮಡಿಕೇರಿಯಿಂದ ಈ ಹುಡುಗಿಯರು ನಾಪತ್ತೆಯಾಗಿದ್ದರು. ಈ ಕುರಿತು ಮಡಿಕೇರಿ ಠಾಣೆಯಲ್ಲಿ ಇಬ್ಬರು ಕಾಣೆಯಾಗಿರುವ ದೂರು ದಾಖಲಾಗಿತ್ತು. ಇದೀಗ ಮಲ್ಪೆ ಬಳಿ ನಿನ್ನೆ ತಡರಾತ್ರಿ ಭಾರಿ ಅಲೆಗಳ ಹೊಡೆತಕ್ಕೆ ಇಬ್ಬರು ಯುವತಿಯರು ಸಮುದ್ರ ಪಾಲಾಗಿದ್ದರು. ಕೂಡಲೇ ಆಪತ್ಬಾಂಧವ ಸಿಬ್ಬಂದಿ ಈಶ್ವರ್​ ಎಂಬುವವರು ಓರ್ವ ಯುವತಿಯನ್ನು ರಕ್ಷಣೆ ಮಾಡಿದ್ದು, ಮತ್ತೊರ್ವ ಯುವತಿ ಅಲೆಗಳ ಹೊಡೆತಕ್ಕೆ ಮೃತಪಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply