Connect with us

    FILM

    ಕಿರುತೆರೆ ನಟಿಯ ವೇಶ್ಯಾವಾಟಿಕೆ ದಂಧೆ – ರೆಡ್ ಹ್ಯಾಂಡ್ ಆಗಿ ಹಿಡಿದ ಪೊಲೀಸರು…!!

    ಮುಂಬೈ ಎಪ್ರಿಲ್ 18: ಹಿಂದಿಯ ಕಿರುತೆರೆ ನಟಿಯ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ ಖ್ಯಾತ ಕಿರುತೆರೆ ನಟಿ ಆರತಿ ಹರೀಶ್ ಚಂದ್ರ ಮಿತ್ತಲ್ ಅವರನ್ನು ಬಂಧಿಸಿದ್ದಾರೆ. ಈಕೆ ಮಾಡೆಲ್ ಗಳನ್ನು ಬಳಕೆ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಗೊತ್ತಾಗಿದೆ. ಮಾಹಿತಿ ಸಿಗುತ್ತಿದ್ದಂತೆಯೇ ಆರತಿಯನ್ನು ಬೆನ್ನತ್ತಿದ್ದ ಪೊಲೀಸರು ರೆಡ್ ಹ್ಯಾಂಡ್ ಆಗಿಯೇ ಹಿಡಿದಿದ್ದಾರೆ.


    ಅಪ್ನಾಪನ್ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ಆರತಿ, ಕಾಸ್ಟಿಂಗ್ ಡೈರೆಕ್ಟರ್ ಆಗಿಯೂ ಗುರುತಿಸಿಕೊಂಡವರು. ಇವುಗಳ ಜೊತೆಗೆ ಮುಂಬೈನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಗ್ರಾಹಕರ ಮಾರುವೇಶದಲ್ಲಿ ಆರತಿಯನ್ನು ಸಂಪರ್ಕಿಸಿರುವ ಪೊಲೀಸರು ನಂತರ ಆರತಿಯನ್ನು ಬಂಧಿಸಿದ್ದಾರೆ. ಇವರ ಜೊತೆ ರಾಕೆಟ್ ನಲ್ಲಿ ಇಬ್ಬರು ಮಾಡೆಲ್ ಗಳು ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


    ಪೊಲೀಸ್ ಅಧಿಕಾರಿಯೊಬ್ಬರು ಕಿರುತೆರೆ ನಟಿ ಆರತಿಗೆ ತಮಗೆ ಇಬ್ಬರು ಹುಡುಗಿಯನ್ನು ಕಳುಹಿಸುವಂತೆ ಸಂಪರ್ಕಿಸಿದ್ದಾರೆ. 60 ಸಾವಿರ ಬೇಡಿಕೆ ಇಟ್ಟು, ಹುಡುಗಿಯರನ್ನು ಕಳುಹಿಸುವುದಾಗಿ ಆರತಿ ತಿಳಿಸಿದ್ದರು. ಹಣ ಕೊಡುವುದಾಗಿಯೂ ಅಧಿಕಾರಿ ತಿಳಿಸಿದ್ದರು.
    ಹೋಟೆಲ್ ರೂಮ್ ಗೆ ತೆರಳುವ ಮುನ್ನ ಸ್ವತಃ ಆರತಿಯೇ ಸ್ಥಳದಲ್ಲಿ ಇದ್ದರು. ಇವೆಲ್ಲವನ್ನೂ ಪೊಲೀಸರು ರೆಕಾರ್ಡ್ ಮಾಡಿಕೊಂಡೇ ಆರತಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆರತಿ ಜೊತೆ ಯಾರೆಲ್ಲ ಇದ್ದಾರೆ ಎನ್ನುವುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply