LATEST NEWS
ಅನಗತ್ಯವಾಗಿ ರಸ್ತೆಗೆ ಬಂದ್ರೆ ಅರೆಸ್ಟ್ – ಪೊಲೀಸ್ ಕಮೀಷನರ್

ಅನಗತ್ಯವಾಗಿ ರಸ್ತೆಗೆ ಬಂದ್ರೆ ಅರೆಸ್ಟ್ – ಪೊಲೀಸ್ ಕಮೀಷನರ್
ಮಂಗಳೂರು ಮಾರ್ಚ್ 23: ಮಂಗಳೂರು ನಗರ ಜನರಿಗೆ ಪೊಲೀಸ್ ಕಮೀಷನರ್ ಡಾ.ಪಿ ಎಸ್ ಹರ್ಷ ಖಡಕ್ ಎಚ್ಚರಿಕೆ ನೀಡಿದ್ದಾರೆ.ಇಡೀ ಜಿಲ್ಲೆ ಲಾಕ್ ಡೌನ್ ಇದ್ದರೂ ಅನಗತ್ಯವಾಗಿ ರಸ್ತೆಗೆ ಬಂದ್ರೆ ಅರೆಸ್ಟ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕರೋನಾ ವೈರಸ್ ಮುಂಜಾಗೃತೆಯಾಗಿ ಮನೆಯಲ್ಲೇ ಇದ್ದು,ಸರ್ಕಾರದ ಕಾನೂನನ್ನು ಪಾಲಿಸಿ ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ನೀಡಿರುವ ಆದೇಶ ವನ್ನು ಪಾಲಿಸಿದೆ ರಸ್ತೆಗಿಳಿದ್ರೆ IPC ಸೆಕ್ಷನ್ 188, 269, 270 ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಧಾರ್ಮಿಕ ಕೇಂದ್ರ ಗಳಲ್ಲಿ ಯಾವುದೇ ಪ್ರಾರ್ಥನೆಗಳಿಗೆ ಅವಕಾಶ ಇಲ್ಲ, ಎಲ್ಲರೂ ಜಿಲ್ಲಾಡಳಿತ ದೊಂದಿಗೆ ಜನರು ಸಹಕರಿಸಬೇಕು ಎಂದರು.
