ಕರೋನಾ ಮಹಾಮಾರಿಯ ನಿರ್ಮೂಲನೆಗಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಧನ್ವಂತರಿ ಯಾಗ

ಸುಬ್ರಹ್ಮಣ್ಯ ಮಾರ್ಚ್ 23:ಲೋಕಕ್ಕೆ ಅಂಟಿರುವ ಕೊರೊನಾ ಮಹಾಮಾರಿಯ ನಿರ್ಮೂಲನೆಗಾಗಿ ದೇವರ ಮೊರೆ ಹೋಗಲಾಗಿದೆ. ದಕ್ಷಿಣಕನ್ನಡ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಧನ್ವಂತರಿ ಯಾಗವನ್ನು ಮಾಡುವ ಮೂಲಕ ಲೋಕ ಕಲ್ಯಾಣಕ್ಕಾಗಿ ಸುಬ್ರಹ್ಮಣ್ಯ ನಿಗೆ ಪ್ರಾರ್ಥನೆ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗ ಮಾತ್ರ ಈ ಹೋಮದಲ್ಲಿ ಪಾಲ್ಗೊಂಡಿದ್ದು, ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿಲ್ಲ‌.