Connect with us

  LATEST NEWS

  ಕಾರು ಕದ್ದು 27 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಅರೆಸ್ಟ್…!!

  ಮಂಗಳೂರು ಅಗಸ್ಟ್ 28 : 27 ವರ್ಷಗಳ ಹಿಂದಿನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಉರ್ವ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.


  ಬಂಧಿತನನ್ನು ಕೇರಳದ ಕಲ್ಲಿಕೋಟೆಯ ನಿವಾಸಿ 52 ವಷರ್ದ ಮನೋಜ್ (52) ಎಂದು ಗುರುತಿಸಲಾಗಿದೆ. ಆರೋಪಿ ಅಶೋಕ ನಗರದ ವಿನ್ಸೆಂಟ್ ಪಿರೇರಾ ಎಂಬವರಿಗೆ ಸೇರಿದ ಕಾರನ್ನು ಅದರ ಚಾಲಕ ದಾಮೋದರ ಎಂಬವರು ಕೊಟ್ಟಾರದ ರಸ್ತೆ ಬದಿ 1996ರ ಡಿಸೆಂಬರ್ 24ರಂದು ಪಾರ್ಕ್ ಮಾಡಿದ್ದು, ಮರುದಿನ ನೋಡಿದಾಗ ಅದು ಕಾಣೆಯಾಗಿತ್ತು. ಈ ಬಗ್ಗೆ ಮರುದಿನ ವಿನ್ಸೆಂಟ್ ಪಿರೇರಾ ದೂರು ನೀಡಿದ್ದರು.
  ಈ ಕಾರನ್ನು ಕಳವುಗೈದಿದ್ದ ಆರೋಪಿ ಮನೋಜ್ ಎಂಬಾತ ಕಲ್ಲಿಕೋಟೆಯಲ್ಲಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಉರ್ವ ಪೊಲೀಸರು ಆಗಸ್ಟ್ 23ರಂದು ಕಲ್ಲಿಕೋಟೆಯಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
  ಕಳೆದ 27 ವರ್ಷದಿಂದ ತಲೆಮರೆಸಿಕೊಂಡಿದ್ದ ಈತನನ್ನು ಆಗಸ್ಟ್ 24ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply