Connect with us

    LATEST NEWS

    ಮುಂಬೈ – ನೋಡ ನೋಡುತ್ತಿದ್ದಂತೆ ಗುಂಡಿಯೊಳಗೆ ಇಳಿದ ಕಾರು ..ವಿಡಿಯೋ ವೈರಲ್

    ಮುಂಬೈ: ಕಾರೊಂದು ನಿಂತ ಜಾಗದಲ್ಲೇ ಭೂಮಿಯೊಳಗೆ ಹೋಗುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಹಳೆಯ ಬಾವಿಯೊಂದರ ಮೇಲೆ ನಿರ್ಮಿಸಿದ ಪಾರ್ಕಿಂಗ್ ನಿಂದಾಗಿ ಈ ಅವಘಡ ಸಂಭವಿಸಿದೆ.


    ಮುಂಬೈನ ಘಾಟ್ ಕೋಪರ್ ನಲ್ಲಿ ಎಂಬಲ್ಲಿ ಈ ಘಟನೆ ನಡೆದಿದ್ದು, ಹಳೆಯ ಬಾವಿಯ ಮೇಲೆ ಕಾಂಕ್ರಿಟ್ ಹಾಗಿ ಕಾರು ಪಾರ್ಕಿಂಗ್ ನಿರ್ಮಿಸಲಾಗಿದ್ದು, ಮಳೆ ಹಿನ್ನಲೆ ಕಾಂಕ್ರಿಟ್ ಸ್ಲ್ಯಾಬ್ ಕುಸಿದು ಕಾರು ಬಾವಿಗೆ ಬಿದ್ದಿದೆ.
    ವೃತ್ತಿಯಲ್ಲಿ ವೈದ್ಯರಾಗಿರುವ 67 ವರ್ಷದ ಕಿರಣ್ ದೋಶಿ ಈ ಕಾರಿನ ಮಾಲಕ. ಅವರು ಕಾರಿನ್ನು ಆ ಜಾಗದಲ್ಲಿ ಪಾರ್ಕ್ ಮಾಡಿದ್ದರು. ನಗರಪಾಲಿಕೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಟ್ರಾಫಿಕ್ ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳು ಸೇರಿ ಕಾರನ್ನು ಹೊರತೆಗೆದಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply