ಶಿರಾಢಿ ಘಾಟ್ ಪ್ರಪಾತಕ್ಕೆ ಉರುಳಿದ ಕಾರು – ಚಾಲಕ ಸಾವು

ಪುತ್ತೂರು ನವೆಂಬರ್ 11: ಶಿರಾಢಿ ಘಾಟ್ ನ ಪ್ರಪಾತಕ್ಕೆ ಕಾರೊಂದು ಉರುಳಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಶಿರಾಢಿ ಘಾಟ್ ನ ಬರ್ಚಿನಹಳ್ಳ ಎಂಬಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ತಮಿಳುನಾಡು ಮೂಲದ ವೆಂಕಟರಾಜು ಎಂದು ಗುರುತಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ವೆಂಕಟರಾಜು ದೇವರ ದರ್ಶನ ಮುಗಿಸಿ ವಾಪಾಸಾಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಶಿರಾಢಿಘಾಟ್ ನಲ್ಲಿ ಭೂಕುಸಿತ ಉಂಟಾದ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕುಸಿತದ ಭಾಗಗಲ್ಲಿ ತಡೆಗೊಡೆ ನಿರ್ಮಿಸಲಾಗಿತ್ತು.

ಆದರೆ ವೆಂಕಟರಾಜು ಅವರ ಕಾರು ಇದೇ ತಡೆಗೊಡೆಗೆ ಬಡಿದ ಪರಿಣಾಮ ಕಾರು ಸುಮಾರು 80 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ. ಕಾರಿನಲ್ಲೆ ಒಬ್ಬರೆ ಇದ್ದರು, ಪ್ರಪಾತಕ್ಕೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments