ನೀರಿನ ಟ್ಯಾಂಕ್ ನಲ್ಲಿ ಕೋಳಿ ಸಾಕಣಿ ಮೂಲಕ ವಿಶಿಷ್ಟ ಪ್ರತಿಭಟನೆ

ಪುತ್ತೂರು ನವೆಂಬರ್ 11: ಸಾರ್ವಜನಿಕರ ಹಣವನ್ನು ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲದಂತೆ ಪೋಲು ಮಾಡಿದ ಗ್ರಾಮ ಪಂಚಾಯತ್ ವಿರುದ್ಧ ನೀತಿ ತಂಡ ವಿನೂತನ ಪ್ರತಿಭಟನೆ ನಡೆಸಿತು.

ಪುತ್ತೂರು ತಾಲೂಕಿನ ಗೋಳಿತ್ತೊಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪಾಂಡಿಬೆಟ್ಟು ಒಕ್ಕೆಜಾಲು ಎಂಬಲ್ಲಿ 90,000 ರೂಪಾಯಿ ವೆಚ್ಚದಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಾಣಗೊಂಡ ನೀರಿನ ಟ್ಯಾಂಕ್ ಯಾವುದೇ ಪ್ರಯೋಜನಕ್ಕೆ ಬಾರದ ಹಿನ್ನಲೆಯಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಎರಡು ಮನೆಗಳಿಗೋಸ್ಕರ ಈ ಟ್ಯಾಂಕ್ ನಿರ್ಮಿಸಲಾಗಿದ್ದು ಇದರಲ್ಲಿ ನೀರು ಹಾಕಬೇಕಾದರೆ ಕೊಳವೆ ಬಾವಿಯ ಅಗತ್ಯ ಇದೆ ,ಅದಕ್ಕೆ 70,000 ಅಗತ್ಯ ಇದೆ. ಮತ್ತೆ ಪ್ಯೆಪ್ ಲೈನ್ ಕೂಡಾ ಆಗಬೇಕಿದೆ‌. ಈ ಎರಡು ಅಥವಾ ಹತ್ತು ಮನೆಗಳಿಗೆ ನೀರು ನೀಡಬೇಕಾದರೂ ಈ ನೀರಿನ ಟ್ಯಾಂಕ್ ಇರುವಲ್ಲಿಂದ ಇನ್ನೂರು ಮೀಟರ್ ಕೆಳಗಡೆ ನೀರಿನ ವ್ಯವಸ್ಥೆ ಇದೆ. ಅಲ್ಲಿಂದ ಪೈಪ್ ಹಾಕಿದರೂ ಗರಿಷ್ಠ 50,000 ದಿಂದ 60,000 ರೂಪಾಯಿಗಳಲ್ಲಿ ನೀರಿನ ವ್ಯವಸ್ಥೆ ಮಾಡಬಹುದಿತ್ತು.

ಆದರೆ ಜನರ ತೆರಿಗೆ ಹಣವನ್ನು ಪೋಲು ಮಾಡಿ ಕಳೆದ ಎರಡು ವರ್ಷಗಳಿಂದ ಯಾವುದೇ ಪ್ರಯೋಜನಕ್ಕೆ ಬಾರದ ಹಿನ್ನಲೆಯಲ್ಲಿ ನೀತಿ ತಂಡದ ಪದಾಧಿಕಾರಿಗಳು ಈ ಟ್ಯಾಂಕ್ ನಲ್ಲಿ ಸಾಂಕೇತಿಕ ಕೋಳಿ ಸಾಕಾಣಿಕೆಯ ವಿಶಿಷ್ಟ ಪ್ರತಿಭಟನೆ ನಡೆಸಿದರು.

Facebook Comments

comments