ಚಲಿಸುತ್ತಿದ್ದ ಕಾರಿಗೆ ಬೆಂಕಿ – ಸಂಪೂರ್ಣ ಭಸ್ಮವಾದ ಕಾರು
ಪುತ್ತೂರು ಜುಲೈ 9: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ಭಸ್ಮವಾದ ಘಟನೆ ಪುತ್ತೂರಿನ ಸಂಟ್ಯಾರ್ ನಲ್ಲಿ ನಡೆದಿದೆ.

ಬೆಳ್ಳಾರೆಯ ಇರ್ಷಾದ್ ಎಂಬವರಿಗೆ ಸೇರಿದ ಕಾರು ಇದಾಗಿದ್ದು ಇರ್ಷಾದ್ ತನ್ನ ಆಕಾರಿನಲ್ಲಿ ಸುಳ್ಯದಿಂದ ಪುತ್ತೂರು ಕಡೆ ಬರುತ್ತಿದ್ದ ಸಂದರ್ಭದಲ್ಲಿ ಕಾರಿನ ಹಿಂದಿನ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಾರಿನ ಹಿಂದೆ ಬರುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಗಮನಿಸಿ ಇರ್ಷಾದ್ ಅವರಿಗೆ ಎಚ್ಚರಿಸಿದ್ದಾನೆ.

ನಂತರ ಇರ್ಷಾದ್ ಅವರು ಕಾರನ್ನು ಕೂಡಲೇ ನಿಲ್ಲಿಸಿದ್ದಾರೆ. ಕಾರಿನಿಂದ ಇಳಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡು, ಕಾರು ಸಂಪೂರ್ಣ ಭಸ್ಮವಾಗಿದೆ. ಸ್ಥಳಕ್ಕೆ ಧಾವಿಸಿದ ಪುತ್ತೂರು ಅಗ್ನಿ ಶಾಮಕದಳದವರು ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಕಾರು ಸಂಪೂರ್ಣ ಭಸ್ಮವಾಗಿತ್ತು.
