LATEST NEWS
ಶಿರೂರು ಐಆರ್ ಬಿ ಟೋಲ್ ಗೇಟ್ ನಲ್ಲಿ ಅಫಘಾತ, ಸೆಕ್ಯೂರಿಟಿ ಸಾವು

ಉಡುಪಿ, ಡಿಸೆಂಬರ್ 13: ಬೈಂದೂರು ತಾಲೂಕು ನ ಶಿರೂರು ನಲ್ಲಿರು ಐಆರ್ ಬಿ ಟೋಲ್ ಪ್ಲಾಝಾ ಬಳಿ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಟೋಲ್ ಗೇಟ್ ಗೆ ಕಾರು ಢಿಕ್ಕಿ ಹೊಡೆದಿದೆ.
ಅತೀ ವೇಗದಿಂದ ಬಂದು ಟೋಲ್ ಪ್ಲಾಝಾದ ಬ್ಯಾರಿಕೇಡ್ ಗೆ ಕಾರು ಢಿಕ್ಕಿ ಹೊಡೆದಾಗ ಸ್ಥಳದಲ್ಲಿದ್ದ ಟೋಲ್ ಸಿಬ್ಬಂದಿ ರಾಘವೇಂದ್ರ ಮೇಸ್ತ (44)ಗಂಭೀರವಾಗಿ ಗಾಯಗೊಂಡಿದ್ದಾತನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

ಟೋಲ್ ಗೇಟ್ ಗೆ ಕಾರು ಢಿಕ್ಕಿ ಹೊಡೆಯುವ ದೃಶ್ಯ ಸಿಸಿ ಟಿವಿ ಕ್ಯಾಮೆರಾ ದಲ್ಲಿ ಸೆರೆಯಾಗಿದ್ದು,ಢಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದವರು ಸ್ಥಿತಿಯು ಗಂಭೀರವಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು