Connect with us

LATEST NEWS

309 ಕಿಮೀ ಉದ್ದದ ಹೊಸ ಮಾರ್ಗದ ಯೋಜನೆಗೆ ಕೇಂದ್ರ ಸಂಪುಟದ ಅನುಮೋದನೆ, ಪ್ರಮುಖ ವಾಣಿಜ್ಯ ಕೇಂದ್ರಗಳಾದ ಮುಂಬೈ ಇಂದೋರ್ ಇನ್ನೂ ಹತ್ತಿರ..!

ಮುಂಬೈ :  309 ಕಿಮೀ ಉದ್ದದ ಹೊಸ ಮಾರ್ಗದ ಯೋಜನೆಗೆ ಕೇಂದ್ರ ಸಂಪುಟದ ಅನುಮೋದನೆ ನೀಡಿದ್ದು ಇದರಿಂದ ಎರಡು ಪ್ರಮುಖ ವಾಣಿಜ್ಯ ಕೇಂದ್ರಗಳಾದ ಮುಂಬೈ ಮತ್ತು ಇಂದೋರ್ ಇನ್ನೂ ಹತ್ತಿರವಾಗಲಿದೆ.


ಅನುಮೋದಿತ ಯೋಜನೆಯು ವಾಣಿಜ್ಯ ಕೇಂದ್ರಗಳಾದ ಮುಂಬೈ ಮತ್ತು ಇಂದೋರ್ ಅನ್ನು ಕಡಿಮೆ ಅಂತರದ ರೈಲು ಮಾರ್ಗದ ಮೂಲಕ ಸಂಪರ್ಕಿಸುತ್ತದೆ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ನಡುವೆ ನೇರ ಸಂಪರ್ಕವಿಲ್ಲದ ಪುದೇಶಗಳನ್ನು ಮಹಾರಾಷ್ಟ್ರದ 2 ಜಿಲ್ಲೆಗಳು ಮತ್ತು ಮಧ್ಯಪ್ರದೇಶದ 4 ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ.ಯೋಜನೆಯ ಒಟ್ಟು ವೆಚ್ಚ 18,036 ಕೋಟಿ ರೂಪಾಯಿಗಳು ಮತ್ತು 2028-29 ರ ವೇಳೆಗೆ ಪೂರ್ಣಗೊಳ್ಳಲಿದೆ.ಈ ಯೋಜನೆಯು ನಿರ್ಮಾಣದ ಸಮಯದಲ್ಲಿ ಸುಮಾರು 102 ಲಕ್ಷ ಮಾನವ ದಿನಗಳ ನೇರ ಉದ್ಯೋಗವನ್ನು ಸೃಷ್ಟಿಸುತ್ತದೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿ.ಸಿ.ಇ.ಎ.), ಕೇಂದ್ರ ರೈಲ್ವೆ ಸಚಿವಾಲಯದ ಅಡಿಯಲ್ಲಿ ಒಟ್ಟು ರೂ. 18,036 ಕೋಟೆಗಳ (ಅಂದಾಜು) ಹೊಸ ರೈಲು ಮಾರ್ಗ ಯೋಜನೆಗೆ ಅನುಮೋದನೆ ನೀಡಿದೆ. ಪ್ರಸ್ತಾವಿತ ಹೊಸ ಮಾರ್ಗವು ಇಂದೋರ್ ಮತ್ತು ಮನ್ಮಾಡ್ ನಡುವೆ ನೇರ ರೈಲು ಸಂಪರ್ಕವನ್ನು ಒದಗಿಸುತ್ತದೆ ಮತ್ತು ಚಲನಶೀಲತೆಯನ್ನು ಸುಧಾರಿಸುತ್ತದೆ, ಭಾರತೀಯ ರೈಲ್ವೆಗೆ ವರ್ಧಿತ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ. ಈ ಯೋಜನೆಯು ಪ್ರಧಾನಮಂತ್ರಿ  ನರೇಂದ್ರಮೋದಿಜಿಯವರ ನವಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿದೆ, ಇದು ಈ ಪ್ರದೇಶದ ಜನರನ್ನು “ಆತ್ಮನಿರ್ಭರ” ಮಾಡುವ ಮೂಲಕ ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಯ ಮೂಲಕ ಅವರುಗಳಿಗೆ ಉದ್ಯೋಗ ಸ್ವಯಂ ಉದ್ಯೋಗಗಳಿಗೆ ಅವಕಾಶಗಳನ್ನು ಹೆಚ್ಚಿಸುತ್ತದೆ.
ಈ ಯೋಜನೆಯು ಬಹು-ಮಾದರಿ ಸಂಪರ್ಕಕ್ಕಾಗಿ ಇದು ಒಂದು ಸಮಗ್ರ ಯೋಜನೆ ಮೂಲಕ ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ನ ಸಂಕಲ್ಪ ಸದೃಶವಾಗಿದೆ, – ಹಾಗೂ ಜನರು, ಸರಕು ಮತ್ತು ಸೇವೆಗಳ ಚಲನೆಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ.
ಈ ಯೋಜನೆಯು 2 ರಾಜ್ಯಗಳ 6 ಜಿಲ್ಲೆಗಳನ್ನು ಒಳಗೊಂಡಿದೆ, ಅಂದರೆ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಭಾರತೀಯ ರೈಲ್ವೆಯ ನೆಟ್ವರ್ಕ್ ಅನ್ನು ಸುಮಾರು 309 ಕಿಮೀಗಳಷ್ಟು ಹೆಚ್ಚಿಸುತ್ತವೆ.
ಈ ಯೋಜನೆಯೊಂದಿಗೆ 30 ಹೊಸ ನಿಲ್ದಾಣಗಳನ್ನು ನಿರ್ಮಿಸಲಾಗುವುದು, ಇದು ಮಹತ್ವಾಕಾಂಕ್ಷೆಯ ಜಿಲ್ಲೆ ಬರ್ವಾನಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಹೊಸ ಟ್ರೈನ್ ಯೋಜನೆಯು ಸುಮಾರು 1,000 ಹಳ್ಳಿಗಳು ಮತ್ತು ಸುಮಾರು 30 ಲಕ್ಷ ಜನಸಂಖ್ಯೆಗೆ ನೇರ ರೈಲು ಸಂಪರ್ಕವನ್ನು ಒದಗಿಸುತ್ತದೆ. ಯೋಜನೆಯು ಮಧ್ಯ ಭಾರತದೊಂದಿಗೆ ದೇಶದ ಪಶ್ಚಿಮ / ನೈಋತ್ಯ ಭಾಗಗಳ ನಡುವೆ ಕಡಿಮೆ ದೂರದ ಮಾರ್ಗವನ್ನು ( ನೇರ ಮಾರ್ಗ) ಒದಗಿಸುವ ಮೂಲಕ ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಇದು ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನ ಸೇರಿದಂತೆ ಉಜ್ಜಯಿನಿ – ಇಂದೋರ್ ಪ್ರದೇಶದ ವಿವಿಧ ಪ್ರವಾಸಿ/ಧಾರ್ಮಿಕ ಸ್ಥಳಗಳಿಗೆ ಪವಾಸಿಗರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಯೋಜನೆಯು ಜೆ.ಎನ್.ಪಿ.ಎ. ಮತ್ತು ಇತರ ರಾಜ್ಯದ ಪ್ರಮುಖ ಹಾಗೂ ಪ್ರಧಾನ( ಗೇಟ್ ವೇ ಪೋರ್ಟ್) ಬಂದರುಗಳಿಂದ ಪಿತಾಮ್ ಪುರ ಆಟೋ ಕ್ಲಸ್ಟರ್ ಗೆ (90 ದೊಡ್ಡ ಘಟಕಗಳು ಮತ್ತು 700 ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಹೊಂದಿದೆ) ನೇರ ರೈಲು ಸಂಪರ್ಕವನ್ನು ಒದಗಿಸುತ್ತದೆ. ಈ ಯೋಜನೆಯು ಮಧ್ಯಪ್ರದೇಶದ ಸಿರಿಧಾನ್ಯ ಉತ್ಪಾದಿಸುವ ಜಿಲ್ಲೆಗಳಿಗೆ ಮತ್ತು ಮಹಾರಾಷ್ಟ್ರದ ಈರುಳ್ಳಿ ಉತ್ಪಾದಿಸುವ ಜಿಲ್ಲೆಗಳಿಗೆ ಪರಸ್ಪರ ನೇರ ಸಂಪರ್ಕವನ್ನು ಒದಗಿಸುತ್ತದೆ, ಇದು ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳಿಗೆ ಸಂಪರ್ಕ ವಿತರಿಸಲು ಮತ್ತಷ್ಟು ಅನುಕೂಲವಾಗುತ್ತದೆ.
ಕೃಷಿ ಉತ್ಪನ್ನಗಳು, ರಸಗೊಬ್ಬರ, ಕಂಟ್ರೈನರ್ ಗಳು, ಕಬ್ಬಿಣದ ಅದಿರು, ಉಕ್ಕು, ಸಿಮೆಂಟ್, ಪಿ.ಒ.ಎಲ್. ಮುಂತಾದ ಸರಕುಗಳ ಸಾಗಣೆಗೆ ಇದು ಅತ್ಯಗತ್ಯ ಹಾಗೂ ಅತ್ಯುತ್ತಮ ಮಾರ್ಗವಾಗಲಿದೆ. ಇದರ ಸಾಮರ್ಥ್ಯ ವರ್ಧನೆಯ ಕಾರ್ಯವು ಸುಮಾರು 26 ಎಂ.ಟಿ.ಪಿ.ಎ. (ವರ್ಷಕ್ಕೆ ಮಿಲಿಯನ್ ಟನ್) ಪ್ರಮಾಣದ ಹೆಚ್ಚುವರಿ ಸರಕು ಸಾಗಣೆಗೆ ಕೂಡಾ ಕಾರಣವಾಗಲಿದೆ. ರೈಲ್ವೆ, ಪರಿಸರ ಸ್ನೇಹಿ ಮತ್ತು ಇಂಧನ ದಕ್ಷ ಸಾರಿಗೆ ವಿಧಾನವಾಗಿದ್ದು, ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ದೇಶದ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ತೈಲ ಆಮದು (18 ಕೋಟಿ ಲೀಟರ್) ಕಡಿಮ ಮಾಡುತ್ತದೆ ಮತ್ತು ಇದು 5.5 ಕೋಟಿ ಮರಗಳ ನೆಡುವಿಕೆಗೆ ( ಇಷ್ಟು ಗಾತ್ರದ ಮರಗಳು ಮಾಡಬಹುದಾದ ಪರಿಸರ ಪೂರಕ ಕೆಲಸಗಳಿಂದಾಗಿ 138 ಕೋಟಿ ಕೆಜಿಯಷ್ಟು ಕಾರ್ಬನ್ ಡೈಓಡ್ ಕಡಿಮೆ ಹೊರಸೂಸುವಿಕೆ ಆಗುತ್ತದೆ.) ಸಮಾನವಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *