LATEST NEWS
ಪೌರತ್ವ ಕಾಯ್ದೆಯಿಂದ ದೇಶದ ಒಬ್ಬನೇ ಒಬ್ಬ ಮುಸ್ಲಿಂಗೆ ತೊಂದರೆಯಾದರೇ ಅದರ ಹೊಣೆ ಕೇಂದ್ರ ಸರಕಾರ ಹೋರುತ್ತದೆ

ಪೌರತ್ವ ಕಾಯ್ದೆಯಿಂದ ದೇಶದ ಒಬ್ಬನೇ ಒಬ್ಬ ಮುಸ್ಲಿಂಗೆ ತೊಂದರೆಯಾದರೇ ಅದರ ಹೊಣೆ ಕೇಂದ್ರ ಸರಕಾರ ಹೋರುತ್ತದೆ
ಮಂಗಳೂರು ಜನವರಿ 27:ಪೌರತ್ವ ಕಾಯ್ದೆಯಿಂದ ನಮ್ಮ ದೇಶದ ಒಬ್ಬನೇ ಒಬ್ಬ ಮುಸ್ಲಿಂ ವ್ಯಕ್ತಿಗೆ ತೊಂದರೆ ಆದರೆ ಅದಕ್ಕೆ ಕೇಂದ್ರ ಸರಕಾರವೇ ಹೊಣೆ ಹೋರುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ನಡೆದ ಸಿಎಎ ಪರ ಸಮಾವೇಶದಲ್ಲಿ ಮಾತನಾಡಿದ ಅವರು ನೆರೆಯ ಪಾಕಿಸ್ಥಾನ, ಬಾಂಗ್ಲಾ, ಅಫ್ಘಾನಿಸ್ತಾನ ಮುಸ್ಲಿಂ ರಾಷ್ಟ್ರಗಳಾಗಿದ್ದು ಆ ದೇಶಗಳಿಗೆ ಅವರ ಧರ್ಮವೇ ಸಂವಿಧಾನ ಆದರೆ ಜಾತ್ಯತೀತ ದೇಶದಲ್ಲಿ ಯಾವುದೇ ಅಲ್ಪಸಂಖ್ಯಾತನಿಗೆ ಕಿರುಕುಳ ಆಗಲು ಸಾಧ್ಯವಿಲ್ಲ ಎಂದು ಹೇಳಿದರು. ಅಲ್ಲದೆ ಸಿಎಎ ಕಾಯ್ದೆಯನ್ನು ವಿರೋಧಿಸುವುದು ಬ್ಲಂಡರ್ ಅಷ್ಟೇ ಅಲ್ಲದೆ ಜನಗಣತಿಗಾಗಿ ಎನ್ ಪಿಆರ್ ಮಾಡುವುದು ತಪ್ಪಾಗುತ್ತದೆಯೇ ಜನಸಂಖ್ಯೆ, ಜನತೆಯ ವಿವರ ಸಂಗ್ರಹಿಸುವುದು ತಪ್ಪಾಗುತ್ತದೆಯೇ ? ಎಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಶ್ನಿಸಿದರು.

ಮುಸ್ಲಿಮರಲ್ಲಿರುವ 72 ಜಾತಿ, ವರ್ಗಗಳು ಭಾರತದಲ್ಲಿ ಮಾತ್ರ ಸಿಗಲು ಸಾಧ್ಯ , ಪ್ರಪಂಚದ ಯಾವುದೇ ಮುಸ್ಲಿಂ ರಾಷ್ಟ್ರದಲ್ಲಿ ಇಂಥ ವೈವಿಧ್ಯತೆ ಕಾಣಸಿಗಲ್ಲ. ಪ್ರಧಾನಿ ನರೇಂದ್ರ ಮೋದಿ ಇಷ್ಟೊಂದು ಯೋಜನೆ ಜಾರಿ ಮಾಡಿದ್ದಾರೆ. ಅದರಲ್ಲಿ ಯಾವುದೇ ಯೋಜನೆಯಲ್ಲಿ ಹಿಂದು, ಮುಸ್ಲಿಂ ಎಂದು ಭೇದ ಮಾಡಿದ್ದಾರೆಯೇ ? ಎಂದು ಪ್ರಶ್ನಿಸಿದರು.
1949ರಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಈ ಬಗ್ಗೆ ನಿರ್ಣಯ ಮಾಡಿತ್ತು ಪಾಕಿಸ್ಥಾನದಿಂದ ಬರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಸೂಚಿಸಿತ್ತು. ತಮ್ಮದೇ ಪಕ್ಷದ ಹಿರಿಯರು ನೀಡಿದ್ದ ಸೂಚನೆ ಬಗ್ಗೆ ಕಾಂಗ್ರೆಸಿಗರು ಏನು ಹೇಳುತ್ತಾರೆ. ಭಾರತದಲ್ಲಿ ಹಿಂದು- ಮುಸ್ಲಿಂ ಭೇದ ಭಾವ ಇರಬಾರದು. ಮುಸ್ಲಿಂ ಸಮಾಜದಲ್ಲಿ ಭಯದ ವಾತಾವರಣ ನಿವಾರಿಸಬೇಕು ಬಿಜೆಪಿ ಕಾರ್ಯಕರ್ತರು ಮನೆ, ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಸಿಎಎ ಲೋಕಸಭೆಯಲ್ಲಿ ಕಾಯ್ದೆಯಾಗಿ ಜಾರಿ ಬಂದಿದೆ.ಗಾಂಧೀಜಿ, ನೆಹರು ಕೂಡ ಸಿಎಎ ವಿಚಾರದಲ್ಲಿ ಹೇಳಿದ್ದರು. ಪಾಕಿಸ್ಥಾನದಲ್ಲಿರುವ ಹಿಂದು, ಸಿಖ್, ಪಾರ್ಸಿಗಳಿಗೆ ಪೌರತ್ವ ನೀಡಲು ಹೇಳಿದ್ದರು. ಕಾಂಗ್ರೆಸ್ ನೇತಾರ, ಮನಮೋಹನ್ ಸಿಂಗ್ ಕೂಡ ಇದೇ ಮಾತನ್ನು ಉಲ್ಲೇಖಿಸಿದ್ದರು. ಲೋಕಸಭೆಯಲ್ಲಿ ಮನಮೋಹನ್ ಸಿಂಗ್ ನೀಡಿದ್ದ ಹೇಳಿಕೆ ಬಗ್ಗೆ ಕಾಂಗ್ರೆಸ್ ಏನು ಹೇಳುತ್ತದೆ. ರಾಷ್ಟ್ರ ಧರ್ಮ ಸಾಧ್ಯವಾಗದಿದ್ದರೆ ವಿಪಕ್ಷ ಧರ್ಮವನ್ನಾದ್ರೂ ಪಾಲನೆ ಮಾಡಿ ಸೋನಿಯಾಜೀಗೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.