ಸಿಎಎ ಪರ ಸಮಾವೇಶಕ್ಕೆ ಮೀನುಮಾರುಕಟ್ಟೆ ಬಂದ್.. ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ

ಮಂಗಳೂರು ಜನವರಿ 27: ಮಂಗಳೂರಿನ ಬಂಗ್ರಕೂಳೂರಿನಲ್ಲಿ ಇಂದು ನಡೆಯಲಿರುವ ಸಿಎಎ ಪರ ಸಮಾವೇಶದ ಪ್ರಯುಕ್ತ ಮಂಗಳೂರು ಮೀನು ಮಾರುಕಟ್ಟೆ ಸಂಪೂರ್ಣ ಬಂದ್ ಆಗಿದೆ.

ಇದೀಗ ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧಿ ಪೋಸ್ಟ್ ಗಳು ಹರಿದಾಡಲಾರಂಭಿಸಿದೆ. ಒಂದು ಗುಂಪು ಮುಂದಿನ ದಿನಗಳಲ್ಲಿ ಯಾರೂ ಈ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಬಾರದು ಎಂದು‌ ತಾಕೀತು ಮಾಡುತ್ತಿದೆ.

ಇನ್ನೊಂದು ಗುಂಪು ದೇಶಪ್ರೇಮಿ ಮೀನುಗಾರ‌ ಮಹಿಳೆಯರು ಎಂದು ಹೊಗಳಲು ಆರಂಭಿಸಲಾಗಿದೆ. ಈ ಹಿಂದೆ ಅಡ್ಯಾರ್ ನಲ್ಲಿ ನಡೆದ ಸಿಎಎ,ಎನ್.ಆರ್.ಸಿ ವಿರೋಧಿ ಪ್ರತಿಭಟನೆ ಸಂದರ್ಭದಲ್ಲೂ ಕೆಲವರು ಸ್ವಯಂಪ್ರೇರಿತವಾಗಿ ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಪಾಲ್ಗೊಳ್ಳಲು ತೆರಳಿದ್ದರು. ಆ ಸಂದರ್ಭದಲ್ಲೂ‌ ಇಂಥಹುದೇ ಕಮೆಂಟ್ ಳು ಹರಿದಾಡಲಾರಂಭಿಸಿತ್ತು.

Facebook Comments

comments