ಸಿಎಎ ಪರ ನವ ವಧುವರರಿಂದ ಭಿತ್ತಿ ಪತ್ರ ಪ್ರದರ್ಶನ

ಬೆಳ್ತಂಗಡಿ ಫೆಬ್ರವರಿ 10: ದೇಶದಾದ್ಯಂತ ಸಿಎಎ, ಎನ್ ಆರ್ ಸಿ ಪರ ವಿರೋಧ ಪ್ರತಿಭಟನೆಗಳು ನಡೆಯುತ್ತಿದ್ದು, ಬಹುತೇಕ ಸಮಾರಂಭಗಳಲ್ಲಿ ಸಿಎಎ ಪರ ಅಥವಾ ವಿರೋಧದ ಚರ್ಚೆಗಳು ನಡೆಯುತ್ತಿವೆ.ಸಿಎಎ ವಿರೋಧಿಸಿ ಕೇರಳದಲ್ಲಿ ಮದುವೆ ಮನೆಗಳಲ್ಲಿ ಭಿತ್ತಿಪತ್ರ ತೋರಿಸುತ್ತಿದ್ದ ವಧುವರರ ನಡುವೆ ಮಂಗಳೂರಿನಲ್ಲಿ ಸಿಎಎ ಪರ ನವ ವಧುವರರು ಮದುವೆ ಮನೆಯಲ್ಲಿ ಭಿತ್ತಿ ಪತ್ರ ಪ್ರದರ್ಶಿಸಿದರು.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ನಡೆದ ಮದುವೆಯೊಂದರಲ್ಲಿ ಈ ಕಾನೂನನ್ನು ಬೆಂಬಲಿಸುವ ಭಿತ್ತಿಪತ್ರಗಳನ್ನು ವಧು-ವರ ರು ಪ್ರದರ್ಶಿಸಿದರು. ಬೆಳ್ತಂಗಡಿ ತಾಲೂಕಿನ ಪುದುವೆಟ್ಟಿನ ಗುಂಪಕಲ್ಲು ನಿವಾಸಿ ಹರೀಶ್ ಹಾಗೂ ಮಲ್ಲಿಕಾ ಎಂಬವರ ವಿವಾಹ ಸಮಾರಂಭದಲ್ಲಿ ಈ ರೀತಿಯ ಭಿತ್ತಿಪತ್ರ ಪ್ರದರ್ಶಿಸಲಾಯಿತು. ವಧು-ವರ ರ ಜೊತೆಗೆ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ನೆಂಟರಿಷ್ಟರೂ ಭಿತ್ತಿಪತ್ರ ಪ್ರದರ್ಶಿಸಿದರು.