LATEST NEWS
ಓಂಕಾರ ನಗರದ ಶ್ರೀ ಗಣೇಶನ ವೈಭವದ ಶೋಭಾ ಯಾತ್ರೆ

ಮಂಗಳೂರು, ಆಗಸ್ಟ್ 27: ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್‍ನ ಓಂಕಾರ ನಗರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಕೊನೆಯ ದಿನವಾದ ಇಂದು ಶ್ರೀ ಗಣೇಶನ ಶೋಭಾ ಯಾತ್ರೆ ವೈಭವದಿಂದ ನಡೆಯಿತು.
ಬಂಟ್ಸ್ ಹಾಸ್ಟೆಲ್‍ನಲ್ಲಿ ಪೂಜಿತಗೊಂಡು ನಡೆದ ಈ ಗಣೇಶನ ಶೋಭಾಯಾತ್ರೆ ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧ ಕಡೆಗಳಿಂದ 50 ಕ್ಕೂ ಅಧಿಕ ಮಹಿಳೆಯರು, ಮಕ್ಕಳು ಹಾಗೂ ಪುರುಷರ ಭಜನಾ ತಂಡಗಳು ಶಿಸ್ತುಬದ್ದವಾಗಿ ಭಾಗವಹಿಸಿದ್ದುವು.
ಇಂದು ಬೆಳಗ್ಗೆಯಿಂದಲೇ ಸುರಿಯುತ್ತಿದ್ದ ಮಳೆರಾಯ ಗಣೇಶನ ಶೋಭಾ ಯಾತ್ರೆಗೆ ಕೊಂಚ ಅಡ್ಡಿಯಾಗಿದ್ದರೂ,ಯಾವುದೇ ಸಮಸ್ಯೆಗಳು, ಅಹಿತಕರ ಘಟನೆಗಳು ನಡೆಯದೆ
ಗಣೇಶನ ವಿಗ್ರಹವನ್ನು ಭವ್ಯವಾದ ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿದ ಟ್ರಕ್ ನಲ್ಲಿ ಬಂಟ್ಸ್ ಹಾಸ್ಟೆಲ್, ಕರಂಗಲ್ಪಾಡಿ, ಪಿವಿಎಸ್ ವೃತ್ತ, ಡೊಂಗರಕೇರಿ ಹಾದಿಯಾಗಿ, ಮಹಮ್ಮಯಿ ದೇವಾಳದ ಕೆರೆಯಲ್ಲಿ ಜಲಸ್ತಂಭನಗೊಳಿಸಲಾಯಿತು.