LATEST NEWS
ಗಾಳಿ ಸುದ್ದಿಗೆ ಹೊನ್ನಾವರ ಅಘೋಷಿತ್ ಬಂದ್
ಗಾಳಿ ಸುದ್ದಿಗೆ ಹೊನ್ನಾವರ ಅಘೋಷಿತ್ ಬಂದ್
ಹೊನ್ನಾವರ ಡಿಸೆಂಬರ್ 14: ಹೊನ್ನಾವರ ಮತ್ತೆ ಉದ್ವಿಘ್ನಗೊಳ್ಳಲು ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಹೊನ್ನಾವರದಲ್ಲಿ ಹರಿಡಿರುವ ಗಾಳಿ ಸುದ್ದಿಗಳಿಗೆ ಜನರು ಬೆಚ್ಚಿ ಬಿದ್ದಿದ್ದಾರೆ.
ಹೊನ್ನಾವರ ತಾಲೂಕಿನ ಮಾಗೋಡು ಎಂಬಲ್ಲಿನ ಶಾಲಾ ಬಾಲಕಿಯೊಬ್ಬಳಿಗೆ ದುಷ್ಕರ್ಮಿಗಳು ಕೈಗೆ ಚಾಕುವಿನಿಂದ ಇರಿದಿದ್ದಾರೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದು ಹೊನ್ನಾವರ ತಾಲೂಕಿನಾದ್ಯಂತ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.
ಅಮಾಯಕ ಶಾಲಾ ಬಾಲಕಿಗೆ ಇರಿತದ ಸುದ್ದಿಯ ಸತ್ಯಾಸತ್ಯತೆಯನ್ನು ಬಹಿರಂಗಗೊಂಡಿಲ್ಲ. ಬಾಲಕಿಯನ್ನು ಹೊನ್ನಾವರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಬಾಲಕಿಯನ್ನಾಗಲಿ ಅಥವಾ ಬಾಲಕಿಯ ಪೋಷಕರನ್ನಾಗಲಿ ವಿಚಾರಿಸಲು ಪೊಲೀಸರು ಬಿಡುತ್ತಿಲ್ಲ. ಮಾಧ್ಯಮದರವನ್ನು ಆಸ್ಪತ್ರೆಯಿಂದ ದೂರ ಇಡಲಾಗಿದೆ.
ಈ ನಡುವೆ ಹೊನ್ನಾವರದಲ್ಲಿ ಮತ್ತೆ ಘರ್ಷಣೆ ಭುಗಿಲೇಳುವ ಆತಂಕದಿಂದ ಜನರು ಮನೆ ಸೇರುತ್ತಿದ್ದು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತಿದೆ.
ಪರಿಸ್ಥಿತಿ ಹದಗೆಡುವ ಆತಂಕದ ಹಿನ್ನಲೆಯಲ್ಲಿ ಹೊನ್ನಾವರ ತಾಲೂಕಿನಾದ್ಯಂತ ಇಂದಿನ 24 ಗಂಟೆಗಳ ಕಾಲ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭಟ್ಕಳ ಉಪ ವಿಭಾಗಾಧಿಕಾರಿ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಹೊನ್ನಾವರ ತಾಲೂಕಿನಾದ್ಯಂತ 5ಕ್ಕಿಂತ ಹೆಚ್ಚು ಮಂದಿ ಗುಂಪಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ.
ಹೊನ್ನಾವರದ ಸರಕಾರಿ ಆಸ್ಪತ್ರೆ ಎದುರು ಜನರು ಸೇರುತ್ತಿರುವ ಹಿನ್ನಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಗೆ ಕ್ರಮಕೈಗೊಳ್ಳಲಾಗಿದೆ.