LATEST NEWS
ಮಗಳ ಅಶ್ಲೀಲ ವಿಡಿಯೋ ಪ್ರಸಾರ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಯೋಧನ ಹೊಡೆದು ಕೊಂದರು…!!

ದೆಹಲಿ ಡಿಸೆಂಬರ್ 27 :ಯುವಕನೊಬ್ಬ ತನ್ನ ಮಗಳ ಅಶ್ಲೀಲ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಗಡಿ ಭದ್ರತಾ ಪಡೆ ಸಿಬ್ಬಂದಿಯನ್ನು ಗುಜರಾತ್‌ನ ನಾಡಿಯಾಡ್‌ನಲ್ಲಿ ಹೊಡೆದು ಕೊಂದ ಘಟನೆ ನಡೆದಿದೆ.
ಯೋಧನ ಮಗಳು ಮತ್ತು ವಿಡಿಯೋ ಅಪ್ಲೋಡ್ ಮಾಡಿದ್ದ ಯುವಕ ಒಂದೇ ಶಾಲೆಯಲ್ಲಿ ಕಲಿಯುತ್ತಿದ್ದು, ಇವರಿಬ್ಬರು ಪ್ರೇಮ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ಆದರೆ ಹುಡುಗ ಬಾಲಕಿಯ ಅಶ್ಲೀಲ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಇದನ್ನು ಪ್ರಶ್ನಿಸುವುದಕ್ಕಾಗಿ ಯೋಧ ಚಕ್ಲಾಸಿ ಗ್ರಾಮದಲ್ಲಿ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ 15 ವರ್ಷದ ಯುವಕನ ಮನೆಗೆ ಯೋಧ ಹೋಗಿದ್ದ ಎಂದು ಮೂಲಗಳು ತಿಳಿಸಿವೆ. ಅಲ್ಲಿ ಮನೆಯವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ಪೊಲೀಸರು ದಾಖಲಿಸಿದ ಎಫ್ಐಆರ್ ಪ್ರಕಾರ, ಶನಿವಾರ ರಾತ್ರಿ ಹುಡುಗನ ಮನೆಗೆ ಯೋಧ, ಆತನ ಪತ್ನಿ, ಇಬ್ಬರು ಪುತ್ರರು, ಅಳಿಯ ಹೋಗಿದ್ದರು. ಅಲ್ಲಿಗೆ ಹೋದಾಗ ಹುಡುಗನ ಕುಟುಂಬ ಇವರನ್ನು ನಿಂದಿಸಿದೆ. ಇದನ್ನು ತಡೆದಾಗ ಈ ಕುಟುಂಬ ಯೋಧನ ಕುಟುಂಬದ ಮೇಲೆ ದಾಳಿ ಮಾಡಿದೆ ಎಂದು ಎಫ್ಐಆರ್ ನಲ್ಲಿ ಹೇಳಿದೆ.