Connect with us

    LATEST NEWS

    ಮನೆಯಲ್ಲಿ ಪೋಷಕರ ನಿರ್ಲಕ್ಷ್ಯಕ್ಕೆ ತಂಗಿಯನ್ನೆ ಕೊಂದ ಅಣ್ಣ

    ಮನೆಯಲ್ಲಿ ಪೋಷಕರ ನಿರ್ಲಕ್ಷ್ಯಕ್ಕೆ ತಂಗಿಯನ್ನೆ ಕೊಂದ ಅಣ್ಣ

    ಮಂಗಳೂರು ಅಕ್ಟೋಬರ್ 28: ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ಯುವತಿಯ ನಾಪತ್ತೆ ಪ್ರಕರಣವನ್ನು ಮಂಗಳೂರು ಪೋಲೀಸರು ಭೇಧಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಯುವತಿಯ ಅಣ್ಣನೇ ಆಕೆಯನ್ನು ಕೊಲೆ ಮಾಡಿರುವ ವಿಚಾರ ತನಿಖೆಯಿಂದ ತಿಳಿದು ಬಂದಿದೆ ಎಂದು ಮಂಗಳೂರು ಪೋಲೀಸ್ ಕಮಿಷನರ್ ಡಾ. ಪಿ.ಎಸ್.ಹರ್ಷ ಮಾಹಿತಿ ನೀಡಿದ್ದಾರೆ.

    ಅಕ್ಟೋಬರ್ 8 ರಂದು ಕೊಣಾಜೆ ಪೋಲೀಸ್ ಠಾಣಾ ವ್ಯಾಪ್ತಿಯ ಮುಡಿಪು ನಿವಾಸಿ ಸ್ಟೀಫಲ್ ಕುಟಿನ್ಹೋ ಮನೆಯಿಂದಿ ದಿಢೀರನೆ ನಾಪತ್ತೆಯಾಗಿದ್ದರು. ಈ ಸಂಬಂಧ ಯುವತಿಯ ತಂದೆ ಫ್ರಾನ್ಸಿಸ್ ಕೊಣಾಜೆ ಪೋಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ್ದರು. ಆದರೆ ಯುವತಿಯನ್ನು ಪತ್ತೆ ಹಚ್ಚುವ ಪ್ರಯತ್ನಕ್ಕೆ ಪೋಲೀಸರಿಗೆ ಯಾವುದೇ ಸುಳಿವು ದೊರೆತಿರಲಿಲ್ಲ.

    ಯುವತಿ ನಾಪತ್ತೆಯಾದ ಅಕ್ಟೋಬರ್ 8 ರಂದು ಆಕೆಯ ಮನೆಯಲ್ಲಿ ಆಕೆ ಹಾಗೂ ಆಕೆಯ ಅಣ್ಣ ಸ್ಯಾಮ್ಸನ್ ಮಾತ್ರ ಇದ್ದ ಮಾಹಿತಿಯ ಹಿನ್ನಲೆಯಲ್ಲಿ ಅಣ್ಣನನ್ನು ತೀವೃ ವಿಚಾರಣೆ ನಡೆಸಿದಾಗ ಯುವತಿಯನ್ನು ತಾನೇ ಕೊಂದಿರುವ ವಿಚಾರವನ್ನು ಪೋಲೀಸರಿಗೆ ತಿಳಿಸಿದ್ದಾನೆ. ಅಲ್ಲದೆ ಶವವನ್ನು ಮನೆಯ ಪಕ್ಕದಲ್ಲೇ ಇರುವ ಗುಡ್ಡದಲ್ಲಿ ಎಸೆದಿರುವುದಾಗಿಯೂ ಒಪ್ಪಿಕೊಂಡಿದ್ದಾನೆ. ಮನೆಯಲ್ಲಿ ಪೋಷಕರು ತನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ, ತಂಗಿಗೇ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎನ್ನುವ ಕ್ಷುಲ್ಲಕ ಕಾರಣಕ್ಕಾಗಿ ಸ್ಯಾಮ್ಸನ್ ತನ್ನ ತಂಗಿಯನ್ನು ಕೊಲೆ ಮಾಡಿರುವುದಾಗಿ ಪೋಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ. ಕೊಲೆಗೆ ಸಂಬಂಧಿಸಿದಂತೆ ಕೊಣಾಜೆ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *