Connect with us

    DAKSHINA KANNADA

    ಉಪ್ಪಿನಂಗಡಿಯಲ್ಲಿ ಮೂವರಿಗೆ ಲಂಚದ ಹಣ ವಾಪಸ್: ಶಾಸಕ ಅಶೋಕ್ ಕುಮಾರ್ ರೈ

    ಉಪ್ಪಿನಂಗಡಿ, ಜೂನ್ 13: ಪಡೆದ ಲಂಚವನ್ನು ಅಧಿಕಾರಿಗಳೇ ವಾಪಸ್ ಮಾಡಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಅಶೋಕ್ ಕುಮಾರ್ ರೈಯವರು ಶಾಸಕರಾಗಿ ಆಯ್ಕೆಯಾದ ಬಳಿಕ ಸರಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೆಲಸ ಮಾಡಿಕೊಡುತ್ತೇವೆಂದು ಈ ಮೊದಲು ಅಧಿಕಾರಿಗಳು ಲಂಚ ಪಡೆದು, ಆ ಬಳಿಕ ಆ ಕೆಲಸವನ್ನು ಮಾಡಿಕೊಡದ ಪ್ರಕರಣವೊಂದರಲ್ಲಿ ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯ ಮೂವರಿಗೆ ಅವರಿಂದ ಪಡೆದುಕೊಂಡಿದ್ದ ಎರಡು ಲಕ್ಷದಷ್ಟು ಹಣವನ್ನು ವಾಪಸ್ ನೀಡಿದ್ದಾರೆ.

    ಅದೇ ರೀತಿ ಪಾಣಾಜೆ, ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ಇಂತಹ ಘಟನೆ ನಡೆದಿದೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ನಾನು ಯಾವುದೇ ಅಧಿಕಾರಿಯ ವಿರೋಧಿ ಅಲ್ಲ. ಆದರೆ ಭ್ರಷ್ಟಾಚಾರ ಹಾಗೂ ಸಾರ್ವಜನಿಕ ಕೆಲಸಗಳಲ್ಲಿ ನಿರ್ಲಕ್ಷ್ಯ ಮಾಡುವ ಅಧಿಕಾರಿ ಯಾರೇ ಆದರೂ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಈ ಹಿಂದೆ ಲಂಚ ತಗೊಂಡು ಕೆಲಸ ಮಾಡಿಕೊಡದ ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳೇ ಸ್ವತಹ ಲಂಚವಾಗಿ ಪಡೆದ ಹಣವನ್ನು ವಾಪಸ್ ಮಾಡಿದ್ದಾರೆ. ಇಂತಹ 3-4 ನಿದರ್ಶನಗಳು ನನ್ನ ಗಮನಕ್ಕೆ ಬಂದಿದೆ.

    ಅಧಿಕಾರಿಗಳು ಲಂಚವಾಗಿ ಪಡೆದುಕೊಂಡ ಹಣವನ್ನು ವಾಪಸ್ ಮಾಡಿದ ಮೇಲೆ ಅದನ್ನು ಪಡೆದುಕೊಂಡ ಜನಸಾಮಾನ್ಯರು ನನ್ನ ಬಳಿಗೆ ಬಂದು ನನಗೆ ಧನ್ಯವಾದ ಹೇಳಿ ಹಾರ ಹಾಕಿ ಹೋಗಿದ್ದಾರೆ. ಅಧಿಕಾರಿಗಳು ಲಂಚದ ಹಣ ಹಿಂದಿರುಗಿಸುವಷ್ಟರ ಮಟ್ಟಿಗೆ ಪುತ್ತೂರಿನಲ್ಲಿ ಕಾರ್ಯಾಂಗ ವ್ಯವಸ್ಥೆ ಮುಟ್ಟಿದೆ ಎಂದರೆ ಅಧಿಕಾರಿಗಳು ಇನ್ನು ಮುಂದಕ್ಕೆ ಲಂಚ ತೆಗೆದುಕೊಳ್ಳಲ್ಲ ಅಂತ ನಿರ್ಣಯ ಮಾಡಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದು ಶಾಸಕಅಶೋಕ್ ಕುಮಾರ್ ರೈ ಹೇಳಿದ್ದಾರೆ

    Share Information
    Advertisement
    Click to comment

    Leave a Reply

    Your email address will not be published. Required fields are marked *