LATEST NEWS
ಲಂಚ ಸ್ವೀಕರಿಸುತ್ತಿದ್ದ ಶಾಲೆಯ ಹೆಡ್ ಮಾಸ್ಟರ್ ಎಸಿಬಿ ಬಲೆಗೆ

ಲಂಚ ಸ್ವೀಕರಿಸುತ್ತಿದ್ದ ಶಾಲೆಯ ಹೆಡ್ ಮಾಸ್ಟರ್ ಎಸಿಬಿ ಬಲೆಗೆ
ಉಡುಪಿ ಮಾರ್ಚ್ 17: ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭ ಹಿರಿಯಡ್ಕ ಶಾಲಾ ಹೆಡ್ ಮಾಸ್ಟರ್ ಎಂ ಕೆ ವಾಸುದೇವ ಎಸಿಬಿ ಬಲೆಗೆ ಬಿದ್ದಿದ್ದಾರೆ.
2017 ರಲ್ಲಿ ಮಣಿಪಾಲದ ಖಾಸಗಿ ಸಂಸ್ಥೆ ಯೊಂದು ಶಾಲಾ ಮಕ್ಕಳಿಗೆ ಶೂ ವಿತರಿಸಿದ ವಿಚಾರದಲ್ಲಿ ಅವ್ಯವಾಹಾರ ನಡೆದಿತ್ತು. ಈ ಶೂ ವಿತರಿಸಿದ ಹಣ 1,09,000 ಬಿಲ್ಲು ಬಿಡುಗಡೆಗೆ ಹಿರಿಯಡ್ ಶಾಲೆಯ ಹೆಡ್ ಮಾಸ್ಟರ್ ವಾಸುದೇವ್ 10 ಸಾವಿರ ಲಂಚ ಬೇಡಿಕೆ ಇಟ್ಟಿದ್ದರು.

ಆ ಬಳಿಕ 7 ಸಾವಿರಕ್ಕೆ ವ್ಯವಹಾರ ವಾಸುದೇವ್ ಅವರು ಒಪ್ಪಿಕೊಂಡಿದ್ದರು. ಇಂದು ಲಂಚದ ಹಣ ಸ್ವೀಕರಿಸಲು ಮುಂದಾದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶಾಲಾ ಹೆಡ್ ಮಾಸ್ಟರ್ ಎಂ.ಕೆ ವಾಸುದೇವ ಅವರನ್ನು ವಶಕ್ಕೆ ಪಡೆದಿದ್ದಾರೆ. ಎಸ್ ಪಿ ಶ್ರುತಿ ಮಾರ್ಗದರ್ಶನ ಮೇರೆಗೆ ಉಡುಪಿ ಡಿವೈ ಎಸ್ ಪಿ ದಿನಕರ್ ಶೆಟ್ಟಿ ಪಿಎಸ್ ಐ ಸತೀಶ್ ತಂಡ ಈ ಕಾರ್ಯಾಚರಣೆ ನಡೆಸಿತ್ತು.