KARNATAKA
ಲಾಂಗ್ ತೋರಿಸಿ ಕದಿಯಲು ಮುಂದಾದ ಯುವಕನಿಗೆ ಕುರ್ಚಿಯಿಂದ ಹೊಡೆದು ಓಡಿಸಿದ ಮಹಿಳೆ

ಚಿಕ್ಕಮಗಳೂರು : ಲಾಂಗ್ ತೋರಿಸಿ ಚಿನ್ನದ ಅಂಗಡಿಯಲ್ಲಿ ಮೂರು ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾದ ಘಟನೆ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ನಡೆದಿದೆ.
ಮುಖಕ್ಕೆ ಮಾಸ್ಕ್ ಧರಿಸಿದ್ದ ವ್ಯಕ್ತಿ , ನಾಗಪ್ಪ ಶೆಟ್ಟಿ ಎಂಬುವರ ಮಾಲಕತ್ವದ ಚಿನ್ನದ ಅಂಗಡಿಗೆ ಬಂದು,ಅಂಗಡಿಯಲ್ಲಿ ಕೆಲಸ ಮಾಡುತಿದ್ದ ಮಹಿಳಾ ಸಿಬ್ಬಂದಿಗಳಿಗೆ ಮಾರಕಾಸ್ತ್ರ ತೋರಿಸಿ ದರೋಡೆ ನಡೆಸಲು ಮುಂದಾಗಿದ್ದಾನೆ ಅಷ್ಟು ಹೊತ್ತಿಗೆ ಇನ್ನೋರ್ವ ಮಹಿಳಾ ಸಿಬ್ಬಂದಿ ದರೋಡೆಕೋರನ ಮೇಲೆ ಚೇರ್ ನಿಂದ ಹೊಡೆಯಲು ಯತ್ನಿಸಿದ್ದು ಈ ವೇಳೆ ಕಳ್ಳ ಅಲ್ಲಿ ಇದ್ದ ಮೂರು ಚಿನ್ನದ ಸರದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಹಿಳೆಯ ಹಾಗೂ ಮಾಲೀಕರ ಸಮಯ ಪ್ರಜ್ಞೆಯಿಂದ ದೊಡ್ಡ ಮಟ್ಟದಲ್ಲಿ ಆಗುವ ದರೋಡೆಯೊಂದು ತಪ್ಪಿದಂತಾಗಿದೆ. ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಳ್ಳನ ಪತ್ತೆಗೆ ಬಲೆ ಬಿಸಿದ್ದಾರೆ. ಮಹಿಳೆ ಕಳ್ಳನಿಗೆ ಕುರ್ಚಿಯಲ್ಲಿ ಹೊಡೆದಿರುವ ವಿಡಿಯೋ ಈಗ ವೈರಲ್ ಆಗಿದ್ದು, ಮಹಿಳೆಯ ದೈರ್ಯಕ್ಕೆ ಮೆಚ್ಚಗೆ ವ್ಯಕ್ತವಾಗಿದೆ.