KARNATAKA
ನಾಗರಹಾವಿನಿಂದ ಮಗನನ್ನು ಕಾಪಾಡಿದ ತಾಯಿ…!!

ಮಂಡ್ಯ ಅಗಸ್ಟ್ 13: ಕೊನೆಕ್ಷಣದಲ್ಲಿ ನಾಗರ ಹಾವಿನಿಂದ ತಮ್ಮ ಮಗನನ್ನು ತಾಯಿಯೊಬ್ಬರು ಕಾಪಾಡಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಈ ವಿಡಿಯೋ ಎದೆ ಝಲ್ ಅನ್ನಿಸುತ್ತಿದೆ.
ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಕೆ.ಎಂ.ದೊಡ್ಡಿ ವೈದ್ಯ ಡಾ.ವಿಷ್ಣು ಪ್ರಸಾದ್ ಮತ್ತು ಪ್ರಿಯಾ ದಂಪತಿ ಪುತ್ರ ನಾಗರಹಾವಿನ ಕಡಿತದಿಂದ ಬಚಾವಾಗಿದ್ದಾನೆ. ಅಗಸ್ಟ್ 9 ರಂದು ಮಂಡ್ಯದ ಚಾಮುಂಡೇಶ್ವರಿ ನಗರದ ನಿವಾಸಕ್ಕೆ ಪತ್ನಿ ಮತ್ತು ಮಗ ಆಗಮಿಸಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.

ಮನೆಯಿಂದ ಹೊರ ಹೋಗಲು ತಾಯಿ ಜತೆ ಬಾಲಕ ಹೊರ ಬಂದಿದ್ದಾನೆ. ಅದೇ ಸಮಯಕ್ಕೆ ಬಾಗಿಲ ಮೆಟ್ಟಿಲ ಬಳಿ ನಾಗರಹಾವು ಹೋಗುತ್ತಿತ್ತು. ಹಾವನ್ನು ಗಮನಿಸದೆ ಬಾಲಕ ಹಾವಿನ ತಲೆ ಬಳಿಯೇ ಕಾಲಿಟ್ಟಿದ್ದಾನೆ. ಈ ವೇಳೆ ಹೆಡೆ ಎತ್ತಿ ನಿಂತಿದೆ. ಕೂಡಲೇ ಹುಡುಗನು ಹಾವಿನ ಹತ್ತರವೇ ಹೋಗಿದ್ದಾನೆ. ಇನ್ನೇನು ನಾಗರಹಾವು ಇನ್ನೇನ್ನು ಕಚ್ಚೇ ಬಿಡ್ತು ಎನ್ನುವಷ್ಟರಲ್ಲಿ ಮಗನನ್ನ ತಾಯಿ ದೂರ ಎಳೆದುಕೊಂಡಿದ್ದಾರೆ.