Connect with us

    DAKSHINA KANNADA

    ದಾಂಪತ್ಯಕ್ಕೆ ಹುಳಿ ಹಿಂಡಿದ ಪ್ರಿಯಕರ: ಪತ್ನಿಯ ನಗ್ನ ಫೋಟೋ ನೋಡಿ ವಿಚ್ಛೇದನಕ್ಕೆ ಮುಂದಾದ ಪತಿ

    ಸುಬ್ರಹ್ಮಣ್ಯ, ಜುಲೈ 16: ಪ್ರಿಯತಮೆಯ ಜೊತೆಗಿನ ನಗ್ನ ಫೋಟೊಗಳನ್ನು ಆಕೆಯ ಗಂಡನಿಗೆ ಕಳುಹಿಸಿ ಪ್ರಿಯತಮನೊಬ್ಬ ದಾಂಪತ್ಯವನ್ನು ವಿಚ್ಛೇದನ ಹಂತಕ್ಕೆ ತಲುಪಿಸಿರುವ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದೆ.

    ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್​ ಠಾಣಾ ವ್ಯಾಪ್ತಿಯ ವಿಜೇಶ್ ಎಂಬ ವ್ಯಕ್ತಿ ಹಾಗೂ ಕಡಬ ತಾಲೂಕಿನ 26 ವರ್ಷದ ಮಹಿಳೆ ಪರಸ್ಪರ ಪ್ರೀತಿಸುತ್ತಿದ್ದರು. 2016 ನವೆಂಬರ್ ತಿಂಗಳ 2 ನೇ ವಾರದ ಒಂದು ದಿನ ಪುತ್ತೂರಿಗೆ ಕೆಲಸಕ್ಕೆ ಹೋಗಿದ್ದಾಗ ಆಕೆಯನ್ನು ಚಹಾ ಕುಡಿಯಲು ಹೋಟೆಲ್‌ಗೆ ಹೋಗೋಣ ಎಂದು ಒತ್ತಾಯ ಮಾಡಿದ್ದಾನೆ.

    ನಂತರ ಆರೋಪಿ ವಿಜೇಶನು ತನ್ನ ಆಲ್ಟೋ ಕಾರಿನಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಟೆಲ್‌ಗೆ ಹೋಗದೆ ಬಲವಂತವಾಗಿ ಮಂಗಳೂರಿನ ಸುರತ್ಕಲ್ ಬಳಿಯ ಖಾಸಗಿ ಹೋಟೆಲ್​ಗೆ ಕರೆದೊಯ್ದಿದ್ದಾನೆ. ನಂತರ ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಮಾಡಿ, ಆಕೆಯ ನಗ್ನ ಸ್ಥಿತಿಯಲ್ಲಿನ ವಿಡಿಯೋ ಮತ್ತು ಫೋಟೋವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

    ಈ ಯುವತಿ 03.05.2021 ರಂದು ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಾಳೆ. ಆದರೆ ಆರೋಪಿ ವಿಜೇಶನು ಈ ಮಹಿಳೆಯ ಗಂಡನಿಗೆ ಆಕೆಯ ನಗ್ನ ಫೋಟೋಗಳನ್ನು ಕಳುಹಿಸಿದ್ದಾನೆ. ಪರಿಣಾಮ ಆತ ಇದೀಗ ವಿವಾಹ ವಿಚ್ಛೇದನಕ್ಕೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಹಿಳೆಯ ದೂರಿನ ಮೇಲೆ ಆರೋಪಿ ವಿಜೇಶನ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಅಪಹರಣ, ಅತ್ಯಾಚಾರ ಹಾಗೂ ಮೋಸದ ಕುರಿತಂತೆ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ವಿದೇಶಕ್ಕೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *