Connect with us

FILM

ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಹಿರಿಯ ನಟಿ ಸುರೇಖಾ ಸಿಕ್ರಿ ನಿಧನ

ಮುಂಬೈ ಜುಲೈ 16: ಮೂರು ಭಾರಿ ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟಿ ಸುರೇಖಾ ಸಿಕ್ರಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು.


ಹಿರಿಯ ನಟ ಸುರೇಖಾ ಸಿಕ್ರಿ ಅವರಿಗೆ 75 ವರ್ಷ ವಯಸ್ಸಾಗಿತ್ತು, 2020ರ ಸೆಪ್ಟೆಂಬರ್ ನಲ್ಲಿ ಬ್ರೈನ್ ಸ್ಟ್ರೋಕ್ ಗ ಒಳಗಾಗಿದ್ದ ಅವರು ನಂತರ ಚಿಕಿತ್ಸೆ ಪಡೆದಿದ್ದರು, ಆದರೆ ಬ್ರೈನ್ ಸ್ಟ್ರೋಕ್ ನಿಂದಾದ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದರು.

ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿದ್ದ ಸುರೇಖಾ ಸಿಕ್ರಿ ಅವರು “ತಮಾಸ್”, “ಮಾಮ್ಮೋ”, “ಬಾದೈ ಹೋ” ಮತ್ತು ಹಿಂದಿ ಧಾರಾವಾಹಿ ಬಾಲಿಕಾ ವಧು ಚಿತ್ರಗಳಲ್ಲಿನ ಅಭಿನಯಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದರು, ಸಿಕ್ರಿ ಕೊನೆಯ ಬಾರಿಗೆ ಜೊಯಾ ಅಖ್ತರ್ ನಿರ್ದೇಶನದ ಸಿನೆಮಾ ಒಂದರಲ್ಲಿ ಅಭಿನಯಿಸಿದ್ದರು, ಸಿಕ್ರಿ ಅವರ ನಿಧನಕ್ಕೆ ಬಾಲಿವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ.