Connect with us

    LATEST NEWS

    ಬಾಲಕಿ ರಕ್ಷಣೆಗೆ ಹೋಗಿ ಬಾವಿಗೆ ಬಿದ್ದ 40 ಮಂದಿ ..ಮೂರು ಸಾವು

    ಮಧ್ಯಪ್ರದೇಶ ಜುಲೈ 16: ಬಾವಿಗೆ ಬಿದ್ದಿದ್ದ ಎಂಟು ವರ್ಷದ ಬಾಲಕಿಯೊಬ್ಬಳನ್ನು ರಕ್ಷಿಸಲು ಹೋಗಿ 40 ಮಂದಿ ಬಾವಿಗೆ ಬಿದ್ದಿ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಮೂವರು ಸಾವನಪ್ಪಿದ್ದಾರೆ.


    ಗುರುವಾರ ಸಂಜೆ ಆಟವಾಡುತ್ತಿದ್ದಾಗ 8 ವರ್ಷದ ಮಗು ಬಾವಿಗೆ ಬಿದ್ದಿದೆ. ಈ ಸುದ್ದಿ ಗ್ರಾಮದಾದ್ಯಂತ ಹರಡುತ್ತಿದ್ದಂತೆ ಅನೇಕ ಜನರು ಬಾವಿಯ ಸುತ್ತಲೂ ನೆರೆದಿದ್ದರು. ಬಾಲಕಿಯನ್ನು ರಕ್ಷಿಸಲು ಪ್ರಯತ್ನಿಸುವಾಗ ಜನಸಂದಣಿಯಿಂದ ಬಾವಿ ಸುತ್ತಲಿನ ಜಾಗ ಇದ್ದಕ್ಕಿದ್ದಂತೆ ಕುಸಿದಿದೆ. 40 ಜನರು ಬಾವಿಗೆ ಬಿದ್ದಿದ್ದಾರೆ ಎಂದು ಭೋಪಾಲ್ ಹೆಚ್ಚುವರಿ ಮಹಾನಿರ್ದೇಶಕ ಸಾಯಿ ಮನೋಹರ್ ತಿಳಿಸಿದ್ದಾರೆ.

    ಬಾವಿ ಸುಮಾರು 50 ಅಡಿ ಆಳವಾಗಿದ್ದು, ಸುಮಾರು 20 ಅಡಿಗಳಷ್ಟು ನೀರಿನ ಮಟ್ಟವಿತ್ತು ಎಂದು ಪಿಟಿಐ ನ್ಯೂಸ್ ವರದಿ ಮಾಡಿದೆ
    ಘಟನಾ ಸ್ಥಳಕ್ಕೆ ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ತಂಡಗಳು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಈವರೆಗೆ 23 ಜನರನ್ನು ರಕ್ಷಿಸಲಾಗಿದೆ ಎಂದು ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಸ್ ಸರಂಗ್ ಹೇಳಿದ್ದಾರೆ. ಈ ಪೈಕಿ 13 ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply