Connect with us

    LATEST NEWS

    ಶೂಲೆಸ್ ಕಟ್ಟಲು ಬಾಗಿದ ವೇಳೆ ವಿಧ್ಯಾರ್ಥಿ ತಲೆಗೆ ಹೊಕ್ಕ ಜಾವೆಲಿನ್….!!

    ನವಿ ಮುಂಬೈ ಸೆಪ್ಟೆಂಬರ್ 07 : ಶೂ ಲೆಸ್ ಕಟ್ಟಲು ಬಾಗಿದ ವೇಳೆ ಜಾವೆಲಿನ್ ವಿಧ್ಯಾರ್ಥಿಯೊಬ್ಬನ ತಲೆಗೆ ಹೊಕ್ಕಿ ವಿಧ್ಯಾರ್ಥಿ ಸಾವನಪ್ಪಿದ ಘಟನೆ ನವಿ ಮುಂಬೈನಲ್ಲಿ ನಡೆದಿದೆ.


    ಮೃತ ಬಾಲಕನನ್ನು 15 ವರ್ಷ ದಹಿವಲಿ ಕೊಂಡ್ ಗ್ರಾಮದ ನಿವಾಸಿ ಹುಜೇಫ ದಾವರೆ ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ರಾಯಗಡ ಜಿಲ್ಲೆಯ ಮಂಗಾಂವ್ ತಾಲೂಕಿನ ಗೋರೆಗಾಂವ್‌ನ ಪುರಾರ್‌ನಲ್ಲಿರುವ ಐಎನ್‌ಟಿ ಇಂಗ್ಲಿಷ್ ಶಾಲೆಯಲ್ಲಿ ಈ ಘಟನೆ ನಡೆದಿದೆ.


    ತಾಲೂಕ ಮಟ್ಟದ ಸ್ಪರ್ಧೆಗಾಗಿ ಶಾಲಾ ಮೈದಾನದಲ್ಲಿ ಜಾವೆಲಿನ್ ಥ್ರೋ ಅಭ್ಯಾಸ ಮಾಡುತ್ತಿದ್ದ ವೇಳೆ ವಿಧ್ಯಾರ್ಥಿಯೊಬ್ಬಜಾವಲಿನ್ ಎಸೆದಿದ್ದಾನೆ. ನಂತರ ಇನ್ನೊಂದು ತುದಿಯಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿ ಅದನ್ನು ಎತ್ತಿಕೊಂಡು ಹಿಂದಕ್ಕೆ ಎಸೆದಿದ್ದಾನೆ. ಈ ವೇಳೆ ಮೃತ ದಾವರೆ ಅವರಿಗೆ ತಿಳಿದಿರಲಿಲ್ಲ. ಅವನು ಶೂಲೆಸ್ ಕಟ್ಟಲು ಕೆಳಗೆ ಬಾಗಿದ್ದು ಜಾವಲಿನ್ ಸೀದಾ ಆತನ ಎಡಗಣ್ಣಿನ ಬಳಿಯಿಂದ ತಲೆಗೆ ಹೊಕ್ಕಿದ್ದು ಸ್ಥಳದಲ್ಲಿ ಸಾವನಪ್ಪಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply