FILM
ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಬಾಳಲ್ಲಿ ಸುಳ್ಳಾಯ್ತು ಜ್ಯೋತಿಷಿ ಭವಿಷ್ಯ..!!
ಮುಂಬೈ : ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ(deepika padukone) ಬಾಳಿನಲ್ಲಿ ಖ್ಯಾತ ಜ್ಯೋತಿಷಿ ಒಬ್ಬರು ನುಡಿದ್ದ ಭವಿಷ್ಯ ಇದೀಗ ಸುಳ್ಳಾಗಿದ್ದು ಜ್ಯೋತಿಷಿ ಭವಿಷ್ಯ ಚರ್ಚೆಗೆ ಗ್ರಾಸವಾಗಿದೆ.
ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಗರ್ಭಿಣಿ ಹೌದೋ ಅಲ್ಲವೋ ಎಂಬ ಬಗ್ಗೆ ಕಳೆದ ಎಂಟು ತಿಂಗಳುಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಚರ್ಚೆಗಳ ಮಧ್ಯೆ ದೀಪಿಕಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ . ಶುಕ್ರವಾರ ಈ ದಂಪತಿ ಸಿದ್ದಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಗಣೇಶನ ದರ್ಶನ ಪಡೆದು ಮುಂಬೈನ ಅಂಬಾನಿ ಮಾಲೀಕತ್ವದ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಾಗಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಳಿಕ ಇದೀಗ ಮಗುವಿನ ಚರ್ಚೆ ಶುರುವಾಗಿದೆ. ಸೆಲೆಬ್ರಿಟಿ ಜ್ಯೋತಿಷಿ ಪಂಡಿತ್ ಜಗನ್ನಾಥ ಗುರೂಜಿ ನುಡಿದ ಭವಿಷ್ಯ ಸುಳ್ಳಾಗಿದೆ.. ಅಷ್ಟಕ್ಕೂ ಕಳೆದ ಜುಲೈ ತಿಂಗಳಿನಲ್ಲಿ ಜ್ಯೋತಿಷಿ ಪಂಡಿತ್ ಜಗನ್ನಾಥ ಗುರೂಜಿ ಅವರು ದೀಪಿಕಾಗೆ ಗಂಡು ಮಗು ಹುಟ್ಟಲಿದೆ ಎಂದು ಭವಿಷ್ಯ ನುಡಿದಿದ್ದರು. ಈ ಮಗು ದಂಪತಿಗೆ ರಾಜಯೋಗ ತರಲಿದೆ ಎಂದೂ ಹೇಳಿದ್ದರು. ಗಂಡು ಮಗುವಿಗೆ ಸಂಪೂರ್ಣ ದೇವರ ಅನುಗ್ರಹವಿದೆ. ಮಗುವಿನ ಶುಕ್ರ ದೆಸೆ ಸೆಲೆಬ್ರೆಟಿ ದಂಪತಿಗಳ ಯಶಸ್ಸು ದಪ್ಪುಟ್ಟು ಮಾಡಲಿದೆ ಎಂದು ಜಗನ್ನಾಥ ಗುರೂಜಿ ಹೇಳಿದ್ದರು. ದೀಪಿಕಾ ಹಾಗೂ ರಣವೀರ್ ಬಾಳಲ್ಲಿ ಗಂಡು ಮಗು ಹೊಸ ಯಶಸ್ಸನ್ನು ನೀಡಲಿದೆ. ಈ ಜೋಡಿಯ ಪ್ರೀತಿ, ಖುಷಿ ಹಾಗೂ ಸಂಭ್ರವನ್ನು ಹೆಚ್ಚಿಸಲಿದೆ ಎಂದಿದ್ದರು.
ಆದರೆ ಇದೀಗ ಎಲ್ಲವೂ ಸುಳ್ಳಾಗಿದೆ. ಸೆಲೆಬ್ರಿಟಿ ಜ್ಯೋತಿಷಿಯೇ ಹೀಗೆ ತಪ್ಪು ಹೇಳಿದರೆ ಹೇಗೆ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಅಷ್ಟಕ್ಕೂ 2021-22ರಲ್ಲಿ ಹಿಂದಿಯ ಕಲರ್ಸ್ ಟಿ.ವಿಯಲ್ಲಿ ಪ್ರಸಾರ ಆಗ್ತಿದ್ದ ಬಿಗ್ ಪಿಕ್ಚರ್ ಷೋನಲ್ಲಿ ರಣವೀರ್ ಸಿಂಗ್ ತಮಗೆ ಹುಟ್ಟಲಿರುವುದು ಗಂಡು ಮಗು ಎನ್ನುವ ಮೂಲಕ ಮಗನಿಗೆ ಶೌರ್ಯವೀರ್ ಸಿಂಗ್ ಎಂದು ಹೆಸರು ಇಡುವುದಾಗಿ ಹೇಳಿದ್ದರು. ಅಲ್ಲಿಗೆ ಬಂದಿರುವ ಸ್ಪರ್ಧಿಯೊಬ್ಬರ ಹೆಸರು ಇವರಿಗೆ ಇಷ್ಟವಾಗಿತ್ತು. ಆಗ ಅವರು, ನನಗೆ ಹೆಚ್ಚಾಗಿ ಹುಟ್ಟುವುದು ಗಂಡುಮಗುವೇ. ಗಂಡುಮಗು ಹುಟ್ಟಿದರೆ ಈ ಹೆಸರನ್ನೇ ಇಡುತ್ತೇನೆ ಎಂದಿದ್ದರು. ಈ ಹೆಸರನ್ನು ನಾನು ನಿಮ್ಮಿಂದ ಪಡೆಯಲಿ ಪರ್ಮಿಷನ್ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದ ರಣವೀರ್ , ಇದೇ ಹೆಸರನ್ನು ಮಗುವಿಗೆ ಇಡುವ ಇಚ್ಛೆ ವ್ಯಕ್ತಪಡಿಸಿದ್ದರು.
You must be logged in to post a comment Login