FILM
ದೀಪಿಕಾ ಪಡುಕೋಣೆ ಗ್ಲಾಮರಸ್ ಬೇಬಿ ಬಂಪ್ ಪೋಟೋ ವೈರಲ್

ಮುಂಬೈ ಸೆಪ್ಟೆಂಬರ್ 02: ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಗ್ಲಾಮರಸ್ ಆಗಿ ಬೆಂಬಿ ಬಂಪ್ ಪೋಟೋ ಶೂಟ್ ಮಾಡಿಸಿಕೊಂಡಿದ್ದು , ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತುಂಬು ಗರ್ಭಿಣಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಜೊತೆ ಪೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಕಪ್ಪು ಬಿಳಿಪು ಚಿತ್ರಗಳಲ್ಲಿ ತಮ್ಮ ಬೆಬಿ ಬಂಪ್ ಪ್ರದರ್ಶಿಸಿರುವ ದೀಪಿಕಾ ಪೋಟೋಗಳು ಇದೀಗ ವೈರಲ್ ಆಗಿದೆ.

ಕೆಲವು ಫೋಟೋಗಳಲ್ಲಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಜೊತೆ ರೋಮ್ಯಾಂಟಿಕ್ ಪೋಸ್ ನೀಡಿದ್ದಾರೆ.
ದೀಪಿಕಾ ಕಪ್ಪು ಬಣ್ಣದ ಬ್ರ್ಯಾಲೆಟ್‌ನೊಂದಿಗೆ ಸೂಟ್ ಧರಿಸಿದ್ದು, ಅದರೊಂದಿಗೆ ಅವರ ಆಕರ್ಷಕ ನಗು ಅವರ ಸೌಂದರ್ಯವನ್ನು ಹೆಚ್ಚಿಸಿದೆ.
ಈ ವರ್ಷದ ಫೆಬ್ರವರಿಯಲ್ಲಿ ದೀಪಿಕಾ-ರಣವೀರ್ ತಂದೆತಾಯಿಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ತಿಂಗಳಲ್ಲಿ ದೀಪಿಕಾ ಪಡುಕೋಣೆ ಮಗುವಿನ ತಾಯಿಯಾಗಲಿದ್ದಾರೆ.