Connect with us

    LATEST NEWS

    ಮಲ್ಪೆ ಬಂದರಿನಲ್ಲಿ ಬೋಟ್ ಬೆಂಕಿಗಾಹುತಿ

    ಮಲ್ಪೆ ಬಂದರಿನಲ್ಲಿ ಬೋಟ್ ಬೆಂಕಿಗಾಹುತಿ

    ಉಡುಪಿ ಜನವರಿ 3: ಮಲ್ಪೆ ಬಂದರಿನಲ್ಲಿ ‌ಲಂಗರು ಹಾಕಿದ್ದ ಬೋಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹಿಮಾಲಯ ಪರ್ಶಿನ್ ಎಂಬ ಹೆಸರಿನ ಬೋಟು ಬೆಂಕಿಗಾಹುತಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಬೋಟ್ ನಲ್ಲಿದ್ದ ಮೀನುಗಾರರು ಅಡುಗೆ ಮಾಡುವ ಸಂದರ್ಭದಲ್ಲಿ ಅಕಸ್ಮಾತ್ತಾಗಿ ಈ ಅವಘಢ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿಗಳು ಬೆಂಕಿ ಆರಿಸಿದ್ದಾರೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಅಂದಾಜಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    VIDEO

     

    Share Information
    Advertisement
    Click to comment

    You must be logged in to post a comment Login

    Leave a Reply