MANGALORE
ಬೀದಿಬದಿ ನಿರ್ಗತಿಕರ ಹಸಿವು ತಣಿಸಿದ ಬ್ಲೂ ಸ್ಟಾರ್ ಕ್ರಿಕೆಟರ್ಸ್..!
ಶಕ್ತಿನಗರದಲ್ಲಿ ಸುಮಾರು 12 ವರ್ಷಗಳ ಹಿಂದೆ ಪ್ರಾರಂಭವಾದಂತಹ ಬ್ಲೂ ಸ್ಟಾರ್ ಕ್ರಿಕೆಟರ್ಸ್ ತಂಡವು ಇಂದಿಗೂ ‘ಒನ್ ಟೀಮ್ ಒನ್ ಡ್ರೀಮ್’ ಧ್ಯೇಯದೊಂದಿಗೆ ಮುನ್ನಡೆಯುತ್ತಿದೆ.
ಮಂಗಳೂರು : ಶಕ್ತಿನಗರದಲ್ಲಿ ಸುಮಾರು 12 ವರ್ಷಗಳ ಹಿಂದೆ ಪ್ರಾರಂಭವಾದಂತಹ ಬ್ಲೂ ಸ್ಟಾರ್ ಕ್ರಿಕೆಟರ್ಸ್ ತಂಡವು ಇಂದಿಗೂ ‘ಒನ್ ಟೀಮ್ ಒನ್ ಡ್ರೀಮ್’ ಧ್ಯೇಯದೊಂದಿಗೆ ಮುನ್ನಡೆಯುತ್ತಿದೆ.
ಬ್ಲೂ ಸ್ಟಾರ್ ಕ್ರಿಕೆಟರ್ಸ್ ತಂಡವು ಶಕ್ತಿನಗರದಲ್ಲಿ ಪ್ರತಿವರ್ಷ ಅದ್ದೂರಿಯಾಗಿ ನಡೆಯುವಂತಹ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಹಾಗೂ ಮೊಸರು ಕುಡಿಕೆ ಉತ್ಸವಕ್ಕೆ ತಮ್ಮ ತಂಡದ ಕೈಯನ್ನೂ ಜೋಡಿಸಿ, ಇನ್ನೂ ಸಂಭ್ರಮದಿಂದ ಆಚರಿಸುವಂತೆ ತೊಡಗಿಸಿಕೊಳ್ಳುತ್ತಿದ್ದಾರೆ.
ಈ ಬಾರಿ ಸಂಭ್ರಮವನ್ನು ಇನ್ನೂ ವಿನೂತನ ರೀತಿಯಲ್ಲಿ ನೆನಪಿಟ್ಟುಕೊಳ್ಳುವಂತೆ ಮಾಡಲು ಒಂದು ಸಮಾಜಮುಖಿ ಕಾರ್ಯವನ್ನು ನಡೆಸುವ ಬಗ್ಗೆ ಚರ್ಚೆ ನಡೆಸಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಹಾಗೂ ಮೊಸರು ಕುಡಿಕೆ ಉತ್ಸವದ ಆಚರಣೆಯ ಖರ್ಚಿನ ನಂತರ ಉಳಿಕೆಯಾದ ಹಣದಲ್ಲಿ ಮಂಗಳೂರಿನಾದ್ಯಂತ ಬೀದಿಬದಿ ವಾಸಿಸುವಂತಹ ಸುಮಾರು 100 ಕ್ಕೂ ಮಿಕ್ಕಿದ ಹಸಿದಿರುವಂತಹ ನಿರ್ಗತಿಕರಿಗೆ ಊಟ ನೀಡುವಂತಹ ಸಮಾಜಮುಖಿ ಕಾರ್ಯಕ್ಕೆ ನಿರ್ಧಾರಿಸುತ್ತಾರೆ.
ಇದರಂತೆ ಕದ್ರಿ, ಬಿಜೈ, ಉರ್ವಾಸ್ಟೋರ್, ಕುಳೂರು, ಕಾವೂರು, ಪದವಿನಂಗಡಿ ಹಾಗೂ ಮುಂತಾದ ಸ್ಥಳಗಳಲ್ಲಿ ವಾಸಿಸುತ್ತಿದ್ದ ಬೀದಿಬದಿ ವಾಸಿಸುವವರಿಗೆ ಊಟವನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಬ್ಲೂ ಸ್ಟಾರ್ ಕ್ರಿಕೆಟರ್ಸ್ ತಂಡದ ಪ್ರಮುಖರು ಹಾಗೂ ಸರ್ವ ಸದಸ್ಯರು, ಶಕ್ತಿನಗರದ ನಿವಾಸಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.