DAKSHINA KANNADA
ಪುತ್ತೂರು ಕಾಂಗ್ರೇಸ್ ನ ಕಚ್ಚಾಟದಲ್ಲಿ ಜಯಭೇರಿ ಬಾರಿಸಿದ ಬಿಜೆಪಿ

ಪುತ್ತೂರು ಕಾಂಗ್ರೇಸ್ ನ ಕಚ್ಚಾಟದಲ್ಲಿ ಜಯಭೇರಿ ಬಾರಿಸಿದ ಬಿಜೆಪಿ
ಮಂಗಳೂರು ಸಪ್ಟೆಂಬರ್ 03: ಕಾಂಗ್ರೇಸ್ ನ ಆಂತರಿಕ ಕಚ್ಚಾಟದಲ್ಲಿ ಮುಳುಗಿ ಹೋಗಿದ್ದ ಪುತ್ತೂರು ನಗರಸಭೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಆಗಸ್ಟ್ 31 ರಂದು ದಕ್ಷಿಣ ಕನ್ನಡ ಜಿಲ್ಲೆಯ 2 ನಗರ ಸಭೆ ಹಾಗು 1 ಪುರಸಭೆಗೆ ಚುನಾವಣೆ ನಡೆದಿತ್ತು.
ಅತ್ಯಂತ ಕುತೂಹಲ ಮೂಡಿಸಿದ ಜಿಲ್ಲೆಯ ಪುತ್ತೂರು ನಗರಸಭೆಯ ಎಲ್ಲಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಪುತ್ತೂರಿನಲ್ಲಿ ಬಿಜೆಪಿ ದಾಖಲೆಯ ಗೆಲುವನ್ನು ಸಾಧಿಸಿದೆ. ಇಲ್ಲಿ ಕಾಂಗ್ರೆಸ್ ಧೂಳಿ ಪಟ ವಾಗಿದ್ದು. ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಇದೇ ಮೊದಲಬಾರಿ ಪುತ್ತೂರು ನಗರ ಸಭೆಯಲ್ಲಿ ಎಸ್ ಡಿ ಪಿ ಐ ಖಾತೆ ತೆರೆದಿದೆ.

ಪುತ್ತೂರು ನಗರ ಸಭೆಯ ಒಟ್ಟು 31 ವಾರ್ಡುಗಳ ಪೈಕಿ ಬಿಜೆಪಿ 25 ವಾರ್ಡ್ ಗಳಲ್ಲಿ ಜಯಗಳಿಸುವ ಮೂಲಕ ಜಯಭೇರಿ ಬಾರಿಸಿದೆ. ಕಾಂಗ್ರೇಸ್ ಕೇವಲ 5 ಸ್ಥಾನಗಳಿಗೆ ತೃಪ್ತಿ ಪಟ್ಟರೆ, ಎಸ್.ಡಿ.ಪಿ.ಐ 1 ಸ್ಥಾನದೊಂದಿಗೆ ಖಾತೆ ತೆರೆದಿದೆ.
ಕಳೆದ ಬಾರಿ ಚುನಾವಣೆಯಲ್ಲಿ 27 ವಾರ್ಡ್ ಗಳಲ್ಲಿ 15 ನ್ನು ಕಾಂಗ್ರೆಸ್ ಗೆದಿದ್ದರೆ, ಬಿಜೆಪಿ 12 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿತ್ತು. ನಗರಸಭೆಯಾದ ಬಳಿಕ ವಾರ್ಡ್ ಗಳ ಸಂಖ್ಯೆ 27 ರಿಂದ 31. ಕ್ಕೆ ಏರಿಕೆಯಾಗಿದೆ. ಪುತ್ತೂರಿನಲ್ಲಿ ಕೇವಲ 5ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದೆ.
ಈ ಫಲಿತಾಂಶ ಕಾಂಗ್ರೆಸ್ ನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ಭವಿಷ್ಯದ ಮೇಲೆ ಪ್ರಶ್ನೆ ಮೂಡಿಸಿದೆ. ಕಾಂಗ್ರೆಸ್ ನ ಈ ಸೋಲಿಗೆ ಪುತ್ತೂರು ಕಾಂಗ್ರೆಸ್ ಪಾಳಯದಲ್ಲಿರುವ ಕಚ್ಚಾಟ ಹಾಗು ಶಕುಂತಾಲಾ ಶೆಟ್ಟಿ ಅವರ ಮೇಲಿರುವ ಅಸಮಾಧಾನ ಕಾರಣ ಎಂದು ಹೇಳಲಾಗುತ್ತದೆ.