Connect with us

DAKSHINA KANNADA

ಕನಿಷ್ಠ ಜ್ಞಾನವಿಲ್ಲದ ಯು.ಟಿ ಖಾದರ್ ಗೆ ಮೋದಿ 56 ಇಂಚಿನ ಎದೆಗಾರಿಕೆ ಗೊತ್ತಿದೆಯೇ..?

ಮಂಗಳೂರು ಜೂನ್ 22: ಚೀನಾ-ಭಾರತ ಸಂಘರ್ಷದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಶಾಸಕ ಯು.ಟಿ ಖಾದರ್ ಗೆ ಪ್ರದಾನಿ ನರೇಂದ್ರ ಮೋದಿಯವರ 56 ಇಂಚಿನ ಎದೆಗಾರಿಕೆ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ ಎಂದು ಬಿಜೆಪಿ ಮಂಗಳೂರು ವಿದಾನಸಭಾ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.


ತೊಕ್ಕೊಟ್ಟು ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚೀನ-ಭಾರತದ ನಡುವಿನ ಗಡಿ ಸಂಘರ್ಷ ಉಲ್ಭಣಿಸಿದ್ದು ಈ ವಿದ್ಯಮಾನಗಳ ಬಗ್ಗೆ ಕನಿಷ್ಠ ಜ್ಞಾನವಿಲ್ಲದ ಶಾಸಕ ಖಾದರ್ ದೇಶದ ಸೈನಿಕರ ಆತ್ಮ ಸ್ಥೈರ್ಯವನ್ನು ಕುಗ್ಗಿಸೋ ಕೃತ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಮಳೆಗಾಲ ಸಂಧರ್ಭದಲ್ಲಿ ಕ್ಷೇತ್ರದಲ್ಲಿ ನಿರಂತರವಾಗಿ ಕಡಲ್ಕೊರೆತ ಸಮಸ್ಯೆ ಕಾಡುತ್ತಿದ್ದು,ನಿನ್ನೆ ಸಚಿವ ಶ್ರೀನಿವಾಸ್ ಪೂಜಾರಿಯವರು ಭೇಟಿ ನೀಡಿ ಕಡಲ್ಕೊರೆತದಿಂದ ತೊಂದರೆಗೊಳಗಾದವರಿಗೆ ಅಭಯ ನೀಡಿ ಇವತ್ತು ಪರಿಹಾರ ಕಾಮಗಾರಿಯನ್ನು ಆರಂಭಿಸಿದ್ದಾರೆ.ಆದರೆ ಕ್ಷೇತ್ರದ ಶಾಸಕರಾದ ಖಾದರ್ ಅವರು ಕಳೆದ 15 ವರುಷಗಳಿಂದಲೂ ನಡೆಸುತ್ತಿರುವ ಶಾಸ್ವತ ಕಾಮಗಾರಿ ಸಂಪೂರ್ಣ ವಿಫಲವಾಗಿದ್ದು,ಕಡಲ್ಕೊರೆತ ತಡೆಯ ಬ್ರೇಕ್ ವಾಟರ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಂಶಯ ಮೂಡಿದೆ.ಬಿಜೆಪಿ ಸರಕಾರದ ಅಧಿಕಾರದಲ್ಲಿ ಕಡಲ್ಕೊರೆತಕ್ಕೆ ಉತ್ತಮ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಬೋಳಿಯಾರ್ ಮಾತನಾಡಿ ಶಾಸಕ ಖಾದರ್ ಅವರು ಬಿಜೆಪಿ ಸಂಸದರು ಮತ್ತು ಉಸ್ತುವಾರಿ ಸಚಿವರು ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆಂಬ ಆಧಾರ ರಹಿತ ಸುಳ್ಳು ಆರೋಪ ಮಾಡಿದ್ದು. ಒಂದು ವೇಳೆ ಖಾದರ್ ಹೇಳಿಕೆ ನಿಜವಾಗಿದ್ದರೆ ನನ್ನ ರಾಜಕೀಯ ಕೊನೆಗೊಳಿಸುತ್ತೇನೆ. ನಮ್ಮ ಸಂಸದ ,ಸಚಿವರ ಪ್ರಾಮಾಣಿಕತೆಯಲ್ಲಿ ಅಷ್ಟು ಭರವಸೆ ಇದೆ. ಈ ಹಿಂದೆ ಇವರುಗಳಿಗೆ ತೊಕ್ಟೊಟ್ಟು , ಪಂಪ್ ವೆಲ್ ಪ್ಲೈ ಓವರ್ ನಾಟಕ ಇತ್ತು. ಈಗ ಬಿಜೆಪಿ ಸಂಸದ, ಸಚಿವರನ್ನು ಠೀಕಿಸಲು ಯಾವುದೇ ವಿಚಾರಗಳಿಲ್ಲ ಅದಕ್ಕೆ ಹತಾಶರಾಗಿ ಗಣಿಗಾರಿಕೆ,ಮರಳುಗಾರಿಕೆಯ ಸುಳ್ಳು ಆರೋಪಗಳನ್ನು ಹೊರಿಸಲು ಮುಂದಾಗಿದ್ದಾರೆ ಎಂದರು.

Facebook Comments

comments