LATEST NEWS
ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರ ಖಂಡಿಸಿ ಬಿಜೆಪಿ ಪ್ರತಿಭಟನೆ

ಉಡುಪಿ, ಮೇ 05: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಫಲಿತಾಂಶ ಬಳಿಕ ನಡೆದ ಹಿಂಸಾಚಾರ ಖಂಡಿಸಿ ಉಡುಪಿಯಲ್ಲಿಂದು ಬಿಜೆಪಿ ಪ್ರತಿಭಟನೆ ನಡೆಸಿತು.
ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಯಿತು.ಮಮತಾ ಬ್ಯಾನರ್ಜಿಯವರು ಚುನಾವಣೆ ಸಂದರ್ಭ ಯೋಗಿ ಅದಿತ್ಯನಾಥ್ ಮತ್ತಿತರ ನಾಯಕರಿಗೆ ಪಶ್ಚಿಮ ಬಂಗಾಳಕ್ಕೆ ಬಾರದಂತೆ ತಡೆದರು.ಫಲಿತಾಂಶದ ಬಳಿಕ ತಮ್ಮ ಬೆಂಬಲಿಗರಿಂದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ.

ಈ ಹಿಂದೆ ಎಲ್ಲೂ ಇಷ್ಟೊಂದು ಹಿಂಸಾಚಾರ ನಡೆದಿಲ್ಲ.ಸ್ವತಃ ಮಮತಾ ಬ್ಯಾನರ್ಜಿ ತಮ್ಮ ಕ್ಷೇತ್ರದಲ್ಲಿ ಸೋತಿದ್ದು ಮುಖ್ಯಮಂತ್ರಿಯಾಗುವ ನೈತಿಕತೆ ಅವರಿಗಿಲ್ಲ.ಪಶ್ಚಿಮ ಬಂಗಾಲದ ಬಿಜೆಪಿ ಕಾರ್ಯಕರ್ತರ ಜೊತೆ ನಾವಿದ್ದೇವೆ ,ಇಂತಹ ಹಿಂಸಾಚಾರ ಸಹಿಸುವುದಿಲ್ಕ ಎಂದರು.
Video: