LATEST NEWS
ಬೆಡ್ ದಂದೆ ಸರ್ಕಾರಿ ವ್ಯವಸ್ಥೆಯೊಳಗೆ ನುಗ್ಗಿದ ಒಂದು ವ್ಯವಸ್ಥಿತ ಜಾಲ: ಶೋಭಾ ಕೆರಂದ್ಲಾಜೆ

ಉಡುಪಿ, ಮೇ 04: ಬೆಂಗಳೂರಿನಲ್ಲಿ ನಡೆದ ಬೆಡ್ ದಂದೆ ಸರ್ಕಾರಿ ವ್ಯವಸ್ಥೆಯೊಳಗೆ ನುಗ್ಗಿದ ಒಂದು ವ್ಯವಸ್ಥಿತ ಜಾಲ, ಬೆಡ್ ದಂದೆ ಮಾಡಿದವರ ಮೇಲೆ, 347 ಕೇಸು ದಾಖಲಿಸಬೇಕು ಎಂದು ಸಂಸದೆ ಶೋಭಾ ಕೆರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಬೆಡ್ ದಂದೆ ಕೊಲೆ ಮಾಡಿದಕ್ಕಿಂತ ಘೋರ ಅಪರಾಧ,ಇದು ಅಮಾನವೀಯ ಬೆಳವಣಿಗೆ. ಆರೋಪಿಗಳ ಮೇಲೆ ಕೊಲೆ ಕೇಸು ದಾಖಲು ಮಾಡಿ ಆ ಕಂಪನಿಯನ್ನು ಪೂರ್ತಿ ಬರ್ಕಾಸ್ತು ಮಾಡಬೇಕು, ಈ ಕೃತ್ಯದಲ್ಲಿ ಶಾಮೀಲಾದ ಎಲ್ಲರಿಗೂ ಉಗ್ರ ಶಿಕ್ಷೆ ಕೊಡಬೇಕು. ಶಾಶ್ವತವಾಗಿ ಅವರನ್ನು ಜೈಲಿನಲ್ಲಿ ಇಡಬೇಕು.ಪರಿಸ್ಥಿತಿ ದುರುಪಯೋಗ ಮಾಡುವವರು ರಾಕ್ಷಸರು ಎಂದಿದ್ದಾರೆ.

ಇದೇ ವೇಳೆ ಸಿಎಂ ರಾಜಿನಾಮೆ ಕೇಳಿರುವ ಸಿದ್ದರಾಮಯ್ಯ ಕುರಿತು ಮಾತನಾಡಿದ ಶೋಭಾ, ಸಿದ್ದರಾಮಯ್ಯ, ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕ.ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ವಿರೋಧಪಕ್ಷಕ್ಕೆ ಅಷ್ಟೆ ಜವಾಬ್ದಾರಿ ಇದೆ. ಮುಖ್ಯಮಂತ್ರಿಗಳ ರಾಜೀನಾಮೆ ಕೇಳುವುದು ಪರಿಹಾರ ಅಲ್ಲ. ಸರಕಾರಕ್ಕೆ ಸಲಹೆ ಕೊಡಿ. ಅಧಿಕಾರಿಗಳ ಸಭೆ ಕರೆಯಿರಿ.
ಸಿದ್ದರಾಮಯ್ಯ ರಾಜ್ಯದಲ್ಲಿ ಐದು ವರ್ಷ ಆಳ್ವಿಕೆ ಮಾಡಿದ್ದಾರೆ. 50 ವರ್ಷದ ಕಾಂಗ್ರೆಸ್ ಕೆಟ್ಟ ಆಡಳಿತವನ್ನು ಈಗ ಅನುಭವಿಸುತ್ತಿದ್ದೇವೆ.ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನಮ್ಮಲ್ಲಿ ಆಸ್ಪತ್ರೆಗಳನ್ನು ಬೆಳೆಸಿಲ್ಲ.ರಾಜಕೀಯ ಮಾತನಾಡುವುದಿಲ್ಲ ಎಲ್ಲರೂ ಒಟ್ಟು ಸೇರಿ ಕೊರೋನಾ ಎದುರಿಸೋಣ ಎಂದಿದ್ದಾರೆ.
Video: