DAKSHINA KANNADA
ಬಹರೈನ್ನಿಂದ ಮಂಗಳೂರಿಗೆ 40 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತ ಭಾರತೀಯ ನೌಕಾದಳದ ಐಎನ್ ಎಸ್ ತಲ್ವಾರ್
ಮಂಗಳೂರು, ಮೇ 04: ಬಹರೈನ್ನಿಂದ ಮಂಗಳೂರಿಗೆ 40 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಹೊತ್ತು ತರುತ್ತಿರುವ ನೌಕೆ ಇಂದು ಮಧ್ಯಾಹ್ನ ನವಮಂಗಳೂರು ಬಂದರು ತಲುಪಿದೆ.
ಕೊರೊನಾ 2 ನೇ ಅಲೆ ರಾಜ್ಯಾದ್ಯಂತ ತೀವ್ರವಾಗಿದ್ದು ಕರಾವಳಿಯಲ್ಲೂ ಭಾದಿಸಿದೆ. ಅಗತ್ಯವಿರುವ ಕೊರೊನಾ ಪೀಡಿತರಿಗೆ ಆಮ್ಲಜನಕ ಕೊರತೆ ಎದುರಾಗಿದ್ದು ಈ ಹಿನ್ನೆಲೆಯಲ್ಲಿ ಕೊಲ್ಲಿ ರಾಷ್ಟ್ರ ಬಹರೈನ್ ನಿಂದ ಪ್ರಾಣವಾಯು ಆಕ್ಸಿಜನ್ ಹೊತ್ತ ಭಾರತೀಯ ನೌಕ ದಳದ ವಿಶೇಷ ಹಡಗು ನವಮಂಗಳೂರು ಬಂದರಿಗೆ ಆಗಮಿಸಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಾಡಿದ ಮನವಿಗೆ ಸ್ಪಂದಿಸಿ ಬಹರೈನ್ ಸರ್ಕಾರ ಈ ಆಕ್ಸಿಜನ್ ನೆರವನ್ನು ನೀಡಿದೆ. 40 ಮೆಟ್ರಿಕ್ ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹೊತ್ತ ಭಾರತೀಯ ನೌಕಾದಳದ ಐಎನ್ ಎಸ್ ತಲ್ವಾರ್ ವಿಶೇಷ ಹಡಗು ಇಂದು ನಮಮಂಗಳೂರು ಬಂದರಿಗೆ ಆಗಮಿಸಿದೆ.
Video:
You must be logged in to post a comment Login