KARNATAKA
ಲೋಕಸಭಾ ಚುನಾವಣೆಗೆ ಬಿಜೆಪಿ ತಯಾರಿ,ಜ 8ಕ್ಕೆ ಬೆಂಗಳೂರಿನಲ್ಲಿ ವಿಜಯ ಸಿದ್ಧತಾ ಸಭೆ ; ಸುನೀಲ್ ಕುಮಾರ್
ಉಡುಪಿ : ರಾಜ್ಯ ಸರಕಾರದ ಮುಖವಾಣಿ ಮತ್ತು ಕಾರ್ಯಸೂಚಿ ಭ್ರಷ್ಟಾಚಾರವಾಗಿದ್ದು ಇದೇ ವರ್ಗಾವಣೆ, ಕಾರ್ಯಸೂಚಿ, ಹಿಂದು ವಿರೋಧಿ ನೀತಿಯನ್ನು ಜನರ ಮನೆಗೆ ತಲುಪಿಸುತ್ತೇವೆ ಎಂದು ಶಾಸಕ ಸುನೀಲ್ ಕುಮಾರ್ ಗುಡುಗಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ದೊಡ್ಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಜನವರಿ 8ಕ್ಕೆ ವಿಜಯ ಸಿದ್ಧತಾ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ.ಬೆಂಗಳೂರಿನ ಹೊರವಲಯದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ವರೆಗೆ ಸಭೆ ನಡೆಯುತ್ತದೆ..ಕರ್ನಾಟಕದ 28 ಕ್ಷೇತ್ರವನ್ನು ಗೆಲ್ಲುವ ವಿಜಯ ಸಿದ್ಧತಾ ಸಭೆ ಇಟ್ಟುಕೊಂಡಿದ್ದೇವೆ ಇದರಲ್ಲಿ ಬಿಜೆಪಿ ಚುನಾವಣಾ ಕಾರ್ಯತಂತ್ರ ರೂಪಿಸುತ್ತವೆ.ವಿಜಯ ಸಿದ್ಧತಾ ಸಭೆಗೆ ವಿಜಯೇಂದ್ರ ಅಧ್ಯಕ್ಷರಾಗಿರ್ತಾರೆ ಜೊತೆಗೆ ಅರುಣ್ ಸಿಂಗ್, ಯಡಿಯೂರಪ್ಪ ನೇತೃತ್ವದಲ್ಲಿ 54 ಜನಕ್ಕೆ ಜವಾಬ್ದಾರಿ ನೀಡಲಾಗಿದೆ. ಲೋಕಾಸಭಾ ಚುನಾವಣೆ ಗೆಲ್ಲಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಸಭೆಯಲ್ಲಿ ಬಿಜೆಪಿ ಮುಂದಿರುವ ಸವಾಲು ಮತ್ತು ಕಾರ್ಯತಂತ್ರಗಳ ಚರ್ಚೆ ನಡೆಯಲಿದೆ ಜೊತೆಗೆ ಅಭಿಯಾನಗಳು, ಕಾರ್ಯಕ್ರಮ, ಮೋದಿಯ ರಾಲಿ ಬಗ್ಗೆ ಸಿದ್ಧತಾ ಸಭೆ ಮಾಡುತ್ತಿದೆ.
ಕೇಂದ್ರದ ಯೋಜನೆಯನ್ನ ಮತವಾಗಿ ಪರಿವರ್ತಿಸುವ ಕಾರ್ಯತಂತ್ರ ನಡೆಯಲಿದೆ. ರಾಜ್ಯ ಸರಕಾರದ ಮುಖವಾಣಿ ಭ್ರಷ್ಟಾಚಾರ ವರ್ಗಾವಣೆ, ಕಾರ್ಯಸೂಚಿ ಹಿಂದು ವಿರೋಧಿ ನೀತಿಯನ್ನು ಜನರ ಮನೆಗೆ ತಲುಪಿಸುತ್ತೇವೆ ಎಂದು ಗುಡುಗಿದರು. ಬಿಜೆಪಿಯಲ್ಲಿ 5 ಸೀಟು ಗೆಲ್ಲಲು ಬಿಡಲ್ಲ ಎಂದು ಕಾಂಗ್ರೆಸ್ ಹೇಳುತ್ತಿತ್ತು ಆದ್ರೆ ದೇಶಕ್ಕೆ ಮೋದಿ ಬೇಕು ಎಂಬ ಜನಾಭಿಪ್ರಾಯ ಇದೆ.ಎಲ್ಲಾ ಕಾಲದಲ್ಲೂ ಕರ್ನಾಟಕದ ಜನ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಮೂರನೇ ಬಾರಿ ಮೋದಿಯನ್ನು ಪ್ರಧಾನಿ ಮಾಡಲು ಕರ್ನಾಟಕದ ಜನ ನಿರ್ಧರಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ವ ಜನರ ಸರ್ಕಾರ ಅಲ್ಲ ಅದು ರೈತ ವಿರೋಧಿ ಕನ್ನಡ ವಿರೋಧಿ, ಒಂದು ಕೋಮಿನ ಸರ್ಕಾರವಾಗಿದೆ.ಅನುದಾನಗಳನ್ನು ಬೇರೆ ಕಡೆ ಬಳಸಿದ ದಲಿತ ವಿರೋಧಿ ಸರಕಾರವಾಗಿದೆ ರಾಜ್ಯದಲ್ಲಿ ಒಂದು ಕೋಮಿಗೆ ಬೇಕಾದ ಹೇಳಿಕೆ ನಡವಳಿಕೆ ಅನುದಾನ ನೀಡುವ ಸರ್ಕಾರ ಇದಾಗಿದೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.