Connect with us

LATEST NEWS

ಕಾಂಗ್ರೇಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಗೆ ಬೆಂಬಲ – ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ದೂರು

ಉಡುಪಿ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಭಾರತೀಯ ಸೇನೆಯ ಬಗ್ಗೆ ಅವಹೇಳನಕಾರಿ ಬರಹ ಹಾಕಿದ್ದಾರೆ ಎಂದು ಆರೋಪ ಹೊತ್ತಿರುವ ಕಾಂಗ್ರೇಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಪರ ಬೆಂಬಲಕ್ಕೆ ನಿಂತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌.ವಿಷ್ಣುವರ್ಧನ್‌ ಅವರಿಗೆ ದೂರು ಸಲ್ಲಿಸಿದೆ.


ಜಾಲತಾಣದಲ್ಲಿ ಯೋಧರ ವಿರುದ್ಧವಾಗಿ ಹಾಗೂ ಪಾಕಿಸ್ತಾನದ ಪರವಾಗಿ ಪೋಸ್ಟ್‌ ಹಾಕಿರುವ ರಾಧಾಕೃಷ್ಣ ನಾಯಕ್‌ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಮಧ್ಯೆ ಸಿದ್ದರಾಮಯ್ಯ ಅವರು ರಾಧಾಕೃಷ್ಣನ ಪರವಾಗಿ ಟ್ವಿಟರ್‌ನಲ್ಲಿ ಬೆಂಬಲ ಸೂಚಿಸಿರುವುದು ದೇಶದ್ರೋಹಿಗೆ ಬೆಂಬಲ ನೀಡಿದಂತಾಗಿದೆ. ಓರ್ವ ದೇಶದ್ರೋಹಿಯ ದೇಶದ್ರೋಹ ಮತ್ತು ಭಾರತೀಯ ಯೋಧರ ಬಗ್ಗೆ ಕೊಲೆ ಮಾಡುವ ಪಿತೂರಿ ಹೊಂದಿರುವ ವ್ಯಕ್ತಿಗೆ ಸಹಕರಿಸಿರುವುದು ಮೇಲ್ನೋಟಕ್ಕೆ ಸಾಬೀತು ಕಂಡುಬಂದಿರುತ್ತದೆ.

ಈ ಬಗ್ಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ದೇಶದ್ರೋಹಕ್ಕೆ ಸಹಾಯ ಮಾಡಿದ ಮತ್ತು ದೇಶದ್ರೋಹಕ್ಕೆ ಪ್ರಚೋದನೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪಸರಿಸುತ್ತಿರುವ ಐಪಿಸಿ ಸೆಕ್ಷನ್ 124ಎ ರಂತೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ದೂರು ನೀಡಲಾಯಿತು.