Connect with us

    BANTWAL

    ಬಂಟ್ವಾಳ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ : ಪ್ರಕರಣ ದಾಖಲು

    ಬಂಟ್ವಾಳ, ಜುಲೈ 11 : ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಹಿತ ಕರ್ತವ್ಯನಿರತ ಸಿಬ್ಬಂದಿ ಮೇಲೆ ಕೈ ಮಾಡಿ ನಿಂದಿಸಿ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎಫ್​​​ಐಆರ್ ದಾಖಲಾಗಿದೆ.

    ಉಮ್ಮರ್ ಫಾರೂಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಈತನ ಪತ್ನಿ ಬಂಟ್ವಾಳ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಒಳರೋಗಿಯಾಗಿ ದಾಖಲಾಗಿದ್ದರು. ಈ ವೇಳೆ ರಾತ್ರಿ ಸರಿಸುಮಾರು 11 ಗಂಟೆ ವೇಳೆಗೆ ಹೆಂಡತಿಯನ್ನು ನೋಡಬೇಕೆಂದು ಫಾರೂಕ್ ಕೇಳಿದ್ದಾನೆ. ಆದರೆ, ಆಸ್ಪತ್ರೆ ಸಿಬ್ಬಂದಿ ರಾತ್ರಿ ಸಮಯದಲ್ಲಿ ಮಹಿಳೆಯರ ವಾರ್ಡ್​​​ಗೆ ಹೋಗಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರೂ ಫಾರೂಕ್ ಸಿಬ್ಬಂದಿಯನ್ನು ದೂಡಿ ಒಳಗೆ ಹೋಗಿದ್ದಾನೆ.

    ಬಳಿಕ ಸಿಬ್ಬಂದಿ ಕರ್ತವ್ಯ ನಿರತ ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ವಾರ್ಡ್​ ಬಳಿ ಬಂದ ವೈದ್ಯರು ರಾತ್ರಿ ಸಮಯದಲ್ಲಿ ಹೆರಿಗೆ ವಾರ್ಡ್​ಗೆ ಹೋಗಲು ಅವಕಾಶ ಇರುವುದಿಲ್ಲ ಎಂದಿದ್ದಾರೆ. ಆದರೆ, ಆರೋಪಿ ವೈದ್ಯರಿಗೆ ನಿಂದಿಸಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಆಸ್ಪತ್ರೆ ಅಧಿಕಾರಿಗಳು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply