LATEST NEWS
ವಿಧಾನಸಭಾ ಚುನಾವಣೆಯಲ್ಲಿ ನಾನು ಟಿಕೇಟ್ ಆಕಾಂಕ್ಷಿ ಅಲ್ಲ – ಶೋಭಾ ಕರಂದ್ಲಾಜೆ
ವಿಧಾನಸಭಾ ಚುನಾವಣೆಯಲ್ಲಿ ನಾನು ಟಿಕೇಟ್ ಆಕಾಂಕ್ಷಿ ಅಲ್ಲ – ಶೋಭಾ ಕರಂದ್ಲಾಜೆ
ಉಡುಪಿ ಫೆಬ್ರವರಿ 10: ನಾನು ಸಂಸದೆಯಾಗಿ ಆರಾಮವಾಗಿದ್ದೇನೆ, ರಾಜ್ಯ ರಾಜಕಾರಣಕ್ಕೆ ಬರುವ ಆಲೋಚನೆ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.
ಸದ್ಯ ನಾನು ಸಂಸದೆಯಾಗಿ ಒಳ್ಳೆ ಅನುಭವ ಪಡೆದಿದ್ದೇನೆ, ದೆಹಲಿ ರಾಜಕಾರಣ ಕಲಿಯುತ್ತಿದ್ದೇನೆ ಈ ಹಿನ್ನಲೆಯಲ್ಲಿ ರಾಜ್ಯ ರಾಜಕಾರಣಕ್ಕೆ ಬರಲು ಯಾವುದೇ ಆತುರ ಇಲ್ಲ ಎಂದು ಹೇಳಿದರು.
ಕಾಂಗ್ರೇಸ್ ನ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಚುನಾವಣಾ ಪಯಾಣ ಆರಂಭಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ ರಾಹುಲ್ ಗಾಂಧಿ ಹೊಸಪೇಟೆಯಿಂದ ಯಾತ್ರೆ ಆರಂಭಿಸಿದ್ದಾರೆ, ಆನಂದ್ ಸಿಂಗ್ ಜೈಲಿಗೆ ಹೋದವರು ಎಂದು ಸಿದ್ದರಾಮಯ್ಯನೇ ಹೇಳಿದ್ದಾರೆ. ಆದರೂ ಜೈಲಿಗೆ ಹೋದವರ ಕ್ಷೇತ್ರದಿಂದ ಪ್ರವಾಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಕಾರ್ಯಕರ್ತ ಸಂತೋಷ್ ಬೆಂಗಳೂರಲ್ಲಿ ಕೊಲೆಯಾದಾಗ ಪಕ್ಕದ ಮನೆಗೆ ಹೋಗಿ ಸಿಎಂ ಪಾರ್ಟಿ ಮಾಡಿದ್ದಾರೆ. ಶಾಂತಿ ನಗರದಲ್ಲಿರುವ ಖಾದರ್ ಮನೆಯಲ್ಲಿ ಮುಸ್ಲಿಂ ಮುಖಂಡರ ಸಭೆಯಾಗಿತ್ತು, ಸಿಎಂ ಸಂತೋಷ್ ಮನೆಗೆ ಭೇಟಿ ಕೊಟ್ಟಿಲ್ಲ ಎಂದು ಹೇಳಿದ ಅವರು ರಾಹುಲ್ ಗಾಂಧಿಯವರೇ ಇಷ್ಟು ದಿನ ನಿಮ್ಮ ಧ್ವನಿ ಎಲ್ಲಿ ಅಡಗಿತ್ತು ಪ್ರಶ್ನಿಸಿದರು.
ಮಂಗಳೂರು ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಸಂಘ ಪರಿವಾರ ವಿರುದ್ದ ಟೀಕೆ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ ಓಟಿಗಾಗಿ ಇಷ್ಟು ಕೀಳು ಮಟ್ಟಕ್ಕೆ ಇಳಿದಿದ್ದಾರೆ ಆದರೆ ಸಂಘ ಪರಿವಾರ ಯಾವತ್ತೂ ದೇಶದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದೆ ಎಂದರು. ಸಂಘಪರಿವಾರದ ವಿರುದ್ದ ಹಗುರವಾಗಿ ಮಾತನಾಡುವವರಿಗೆ ಜನರೇ ಪಾಠ ಕಲಿಸುತ್ತಾರೆ.
ದೇಶದ ಪ್ರಧಾನಿ ಮತ್ತು ಅನೇಕ ಮಖ್ಯಮಂತ್ರಿಗಳು ಸಂಘ ಪರಿವಾರದಿಂದ ಬಂದಿದ್ದಾರೆ. ಅಂತಹ ಸಂಘಟನೆಯ ವಿರುದ್ದ ಹಗುರವಾಗಿ ಮಾತನಾಡುತ್ತಿದ್ದೀರಾ, ಕಾಂಗ್ರೇಸ್ ಪಕ್ಷ ಕೂಡಲೇ ಪ್ರತಿಭಾ ಕುಳಾಯಿ ವಿರುದ್ದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.