DAKSHINA KANNADA
ಬೆಂಗಳೂರ ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಗೆ ಆಹ್ವಾನ, ಕಾಂಗ್ರೇಸ್ ಸರಕಾರದ ವಿರುದ್ಧವೇ ಕಿಡಿಕಾರಿದ ಕಾಂಗ್ರೇಸ್ ವಕ್ತಾರೆ..
ಬೆಂಗಳೂರು : ಬೆಂಗಳೂರಿನಲ್ಲಿ ನವಂಬರ್ 24 ಮತ್ತು 25 ರಂದು ನಡೆಯುವ ತುಳುನಾಡ ಜಾನಪದ ಕ್ರೀಡೆ ಬೆಂಗಳೂರುಕಂಬಳ ಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷನ್ ಸಿಂಗ್ ರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿರುವುದಕ್ಕೆ ಕಾಂಗ್ರೇಸ್ ಸರಕಾರದ ವಿರುದ್ಧವೇ ಕಾಂಗ್ರೇಸ್ ವಕ್ತಾರೆ ಭವ್ಯ ನರಸಿಂಹ ಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಭವ್ಯ, ಬ್ರಿಜ್ ಭೂಷಣ್ ವಿರುದ್ಧ ಒಲಿಂಪಿಕ್ ಆಟಗಾರರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ಕಂಬಳದಂತಹ ಸಾಂಸ್ಕೃತಿಕ ಕ್ರೀಡೆಗೆ ಬ್ರಿಜ್ ಭೂಷಣ್ ಅಂಥವರನ್ನು ಕರೆದರೆ ಅದು ತಪ್ಪಾಗುತ್ತದೆ. ಅಲ್ಲದೆ ಕಂಬಳಕ್ಕೆ ರಾಜ್ಯ ಸರಕಾರವೂ ಆನುದಾನ ನೀಡಿದ್ದು, ಬ್ರಿಜ್ ಭೂಷಣ್ ರನ್ನ ಅತಿಥಿಯಾಗಿ ಕರೆದಿರುವುದೇ ತಪ್ಪು ಎಂದಿದ್ದಾರೆ. ಬ್ರಿಜ್ ಭೂಷಣ್ ರಂತಹ ವ್ಯಕ್ತಿ ಕರ್ನಾಟಕದ ಮಣ್ಣಿಗೆ ಕಾಲಿಡಲೇ ಬಾರದು. ದೇಶದ ಯಾವ ಮೂಲೆಯಲ್ಲೂ ಮಹಿಳೆಯರಿಗೆ ಕಿರುಕುಳ ನೀಡಿದ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ವೈಭವೀಕರಿಸುವ ಅಗತ್ಯವಿಲ್ಲ ಎಂದು ಅವರು ಕಂಬಳ ಆಯೋಜಕರ ವಿರುದ್ಧವೂ ಹರಿಹಾಯ್ದಿದ್ದಾರೆ.