LATEST NEWS
ಮನೆ ಮನೆ ಕಾಂಗ್ರೇಸ್ ಅಭಿಯಾನಕ್ಕೆ ವಿರುದ್ದವಾಗಿ ಬಿಜೆಪಿಯಿಂದ ಮನೆ ಮನೆ ಕಮಲ

ಮನೆ ಮನೆ ಕಾಂಗ್ರೇಸ್ ಅಭಿಯಾನಕ್ಕೆ ವಿರುದ್ದವಾಗಿ ಬಿಜೆಪಿಯಿಂದ ಮನೆ ಮನೆ ಕಮಲ
ಮಂಗಳೂರು ಎಪ್ರಿಲ್ 3: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರ ತೊಡಗಿದೆ. ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಏನೆಲ್ಲಾ ಕಸರತ್ತು ಮಾಡುತ್ತಿದೆ. ಬೃಹತ್ ಸಮಾವೇಶ, ಸಮಾವೇಶ ಪಾದಯಾತ್ರೆ ನಂತರ ಮನೆ ಮನೆ ಕಾಂಗ್ರೆಸ್ ಅಭಿಯಾನ ಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಮುಂದಾಗಿದೆ.
ಬಿಜೆಪಿ ಮಹಿಳಾ ಮೋರ್ಚಾ ವತಿಯಿಂತ ಎಪ್ರಿಲ್ 6 ರಂದು ಮನೆ ಮನೆ ಕಮಲ ಅಭಿಯಾನ ಆರಂಭಿಸಲಿದೆ. ಬಿಜೆಪಿ ಮಹಿಳಾ ಕಾರ್ಯಕರ್ತರು ಚುನಾವಣಾ ಪ್ರಚಾರ ಕಣಕ್ಕೆ ಧುಮುಕಲು ಸಿದ್ದರಾಗಿದ್ದು ಎಪ್ರಿಲ್ 6 ರಂದು ಜಿಲ್ಲೆಯ ಅಭಿಯಾನಕ್ಕೆ ಚಾಲನೆ ದೊರಕಲಿದೆ.
ಜಿಲ್ಲೆಯ ಮನೆಮನೆಗೆ ತೆರಳಲಿರುವ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಕೇಂದ್ರ ಸರಕಾರದ ಅಭಿವೃದ್ದಿ ಕಾರ್ಯಕ್ರಮಗಳು ಸೇರಿದಂತೆ ಕೇಂದ್ರ ಆರಂಭಿಸಿರುವ ಜನಪರ ಯೋಜನೆಗಳ ಬಗ್ಗೆ ಈ ಮಹಿಳಾ ಕಾರ್ಯಕರ್ತರು ಮಾಹಿತಿ ನೀಡಲಿದ್ದಾರೆ. ಮಹಿಳೆಯರ ಸ್ವಾವಲಂಬಿ ಬದುಕಿಗೆ ಬಿಜೆಪಿ ಯ ಕೊಡುಗೆಗಳ ಬಗ್ಗೆ ಮನೆಯ ಮಹಿಳೆಯರಿಗೆ ಮನದಟ್ಟು ಮಾಡುವ ಕೆಲಸ ಈ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಮಾಡಲಿದ್ದಾರೆ.

ಈಗಾಗಲೇ ಹಿಂದೂ ಸಂಘಟನೆಗಳು ಹಾಗು ಆರ್ ಎಸ್ ಎಸ್ ಸಂಪೂರ್ಣವಾಗಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪರ ಫೀಲ್ಡ್ ಗೆ ಇಳಿದಿವೆ. ಈ ನಡುವೆ ಬಿಜೆಪಿ ಮಹಿಳಾ ಕಾರ್ಯಕರ್ತರು ಮನೆಮನ ಕಮಲ ಅಭಿಯಾನ ಕಾಂಗ್ರೆಸ್ ಮುಖಂಡರ ನಿದ್ದೆಗೆಡಿಸಿದೆ.