LATEST NEWS
ಸದ್ಯದಲ್ಲೆ ಕಾಂಗ್ರೇಸ್ ಸೇರಲಿದ್ದಾರೆ ಬಿಜೆಪಿ ನಾಯಕರು – ರಮಾನಾಥ ರೈ
ಸದ್ಯದಲ್ಲೆ ಕಾಂಗ್ರೇಸ್ ಸೇರಲಿದ್ದಾರೆ ಬಿಜೆಪಿ ನಾಯಕರು – ರಮಾನಾಥ ರೈ
ಮಂಗಳೂರು ಎಪ್ರಿಲ್ 10: ದಕ್ಷಿಣ ಕನ್ನಡ ಬಿಜೆಪಿಯ ಅತೃಪ್ತರು ನಮ್ಮ ಸಂಪರ್ಕದಲ್ಲಿದ್ದು, ಸದ್ಯದಲ್ಲೆ ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕೆಲವು ಮುಖಂಡರು ಅಭ್ಯರ್ಥಿ ಘೋಷಣೆಗೆ ಕಾಯುತ್ತಿದ್ದಾರೆ, ಟಿಕೆಟ್ ಘೋಷಣೆ ಬಳಿಕ ಬಹಳಷ್ಟು ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಹೇಳಿದರು.
ಕಾಂಗ್ರೇಸ್ ನಲ್ಲಿ ಅಭ್ಯರ್ಥಿ ವಿಚಾರದಲ್ಲಿ ಯಾವುದೇ ಅತೃಪ್ತಿ ಇಲ್ಲ ಎಂದು ಹೇಳಿದ ರಮಾನಾಥ ರೈ ಈ ಬಾರಿ ಕಾಂಗ್ರೇಸ್ ಜಿಲ್ಲೆಯ 8 ಕೇತ್ರಗಳನ್ನು ಗೆಲ್ಲುವುದು ಶತಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರ್ ಎಸ್ ಎಸ್ ಮುಖಂಡ ಪ್ರಬಾಕರ್ ಭಟ್ ಅವರ ಭೂತ ಕಟ್ಟುವವಿಗೆ ತಲೆ ಸರಿಯಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಮಾನಾಥ ರೈ ಇದು ದೈವದ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದಂತಾಗಿದೆ ಎಂದರು. ದೊಡ್ಡ ಹಿಂದುತ್ವವಾದಿಯಾಗಿ ದೈವದ ನಂಬಿಕೆಯನ್ನು ಪ್ರಶ್ನೆ ಮಾಡಿದ್ದಾರೆ. ದೈವಾರಾಧನೆ ಒಂದು ನಂಬಿಕೆ, ಭೂತ ಕಟ್ಟುವವನು ಪ್ರಸಾದ ನೀಡುವುದಿಲ್ಲ, ಬದಲಿಗೆ ದೈವದ ರೂಪದಲ್ಲಿ ಪ್ರಸಾದ ನೀಡುವುದನ್ನು ಇವರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬರೀಯ ಓಟಿಗಾಗಿ ಇಂಥ ಮಾತನ್ನಾಡಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗಿದೆ ಎಂದು ರಮಾನಾಥ ರೈ ಹೇಳಿದರು.
You must be logged in to post a comment Login